ತಾಯಿ ಮಗಳಿಗೆ ಹಲ್ಲೆ-ಮೂವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0

ಪುತ್ತೂರು: ಬಾಬು ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಕ್ಷ್ಮಿ ಮತ್ತು ಗಿರೀಶ್ ಎಂಬವರೊಂದಿಗೆ ಸೇರಿಕೊಂಡು ಪೆ.1 ರಂದು ಪಾಣಾಜೆ ಗ್ರಾಮದಲ್ಲಿರುವ ತನ್ನ‌ ಮನೆಯಲ್ಲಿರುವ ವೇಳೆ ನನಗೆ ಮತ್ತು ತಾಯಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವುದಾಗಿ ಪಾಣಾಜೆ ಗ್ರಾಮದ ನಿವಾಸಿ ನವ್ಯಶ್ರೀ (19) ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಆರೋಪಿಗಳು ಸೇರಿಕೊಂಡು ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿರುವ ಕುರಿತು ದೂರಿನಲ್ಲಿ ಹೇಳಲಾಗಿದ್ದು, ಅ.ಕ್ರ ನಂ 25-2024 ಐಪಿಸಿ ಕಲಂ: 323,504,506 ರಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here