ಪುತ್ತೂರು: ಪುತ್ತೂರು ದರ್ಬೆ ಸಚಿನ್ ಟ್ರೇಡರ್ಸ್ ಎದುರು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಪುತ್ತೂರು ದರ್ಬೆ ಸಚಿನ್ ಟ್ರೇಡರ್ಸ್ ಬಳಿ ಸುರೇಶ್ಚಂದ್ರ ರೈ ಎಂಬವರಿಗೆ ಸೇರಿದ ಟೊಯೋಟಾ ಹೈರೈಡರ್ ಕಾರು ಪುತ್ತೂರು ಪೇಟೆ ಕಡೆಯಿಂದ ದರ್ಬೆ ಕಡೆಗೆ ತೆರಳುತ್ತಿದ್ದ ವೇಳೆ ದರ್ಬೆ ತಲುಪುತ್ತಿದ್ದಂತೆ ಆಕಸ್ಮಿಕವಾಗಿ ಸ್ಟೇರಿಂಗ್ ಲಾಕ್ ಆಗಿದೆ ಎನ್ನಲಾಗಿದೆ. ಪರಿಣಾಮ ಕಾರು ದರ್ಬೆ ಸಚಿನ್ ಟ್ರೇಡಿಂಗ್ ಸೆಂಟರ್ ಬಳಿ ಪಲ್ಟಿಯಾಗಿದೆ. ತಕ್ಷಣ ಕಾರಿನ ಬೆಲೂನ್ ತೆರೆದ ಕಾರಣ ಕಾರಿನಲ್ಲಿದ್ದ ಅವರು ಅಪಾಯದಿಂದ ಪಾರಾಗಿದ್ದರು. ಇದೇ ರಸ್ತೆಯಾಗಿ ಬರುತ್ತಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಕಾರಿನಲ್ಲಿದ್ದವರನ್ನು ಉಪಚರಿಸಿ ಮನೆಗೆ ತನ್ನ ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.