ನೆಹರೂನಗರದ ಕೋಕೋ ಗುರು ಅಡಿಗೆಮನೆಯಲ್ಲಿ ಕಳ್ಳತನ – ದೂರು ದಾಖಲು- ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

0

ಪುತ್ತೂರು: ಪುತ್ತೂರಿನ ನೆಹರೂನಗರದಲ್ಲಿ ಕಾರ್ಯಾಚರಿಸುತ್ತಿರುವ ಕೋಕೋ ಗುರು ಅಡಿಗೆಮನೆಯಲ್ಲಿ ವೈಟರ್‌ ಆಗಿ ಕೆಲಸ ಮಾಡುತ್ತಿದ್ದ ಗಣೇಶ್‌ ಎಂಬಾತ 69,000 ರೂ. ಮತ್ತು ಮೊಬೈಲ್ನೊಂದಿಗೆ ಪರಾರಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಕ್ಯಾಶ್ಯರನ್ನು ಊಟ ಮಾಡಿಬರುವಂತೆ ತಿಳಿಸಿದ ಸಪ್ಲೈಯರ್‌ ತಾನು ಕ್ಯಾಶ್‌ ಕೌಂಟರ್‌ ನ್ನು ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶ್ಯರನ್ನು ಊಟಕ್ಕೆ ಕಳುಹಿಸಿದ್ದಾನೆ. ಕ್ಯಾಶ್ಯರ್‌ ಊಟಕ್ಕೆ ತೆರಳುತ್ತಿದ್ದಂತೆ ಕ್ಯಾಶ್‌ ಡ್ರವರ್‌ ನಲ್ಲಿದ್ದ ರೂ. 69,000 ಹಾಗೂ ಮೊಬೈಲ್‌ ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಪ್ರಾಥಮಿಕವಾಗಿ ಇಷ್ಟು ಮಾಹಿತಿ ತಿಳಿದು ಬಂದಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ. ಸಪ್ಲೈಯರ್‌ ನ ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸಿಸಿ ಟಿವಿ ದೃಶ್ಯಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

https://youtu.be/UT6lT3reAVs

LEAVE A REPLY

Please enter your comment!
Please enter your name here