ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಗ್ರಾಹಕರ ಸಮಾವೇಶದಲ್ಲಿ ಉದ್ಘಾಟನೆ

0

ಪುತ್ತೂರು: 115 ವರ್ಷಗಳ ಇತಿಹಾಸವುಳ್ಳ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ಗ್ರಾಹಕರ ಅವಶ್ಯಕತೆಗೆ ಪೂರಕವಾಗಿ ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಮತ್ತು ನೇರ ಎನ್‌ಇಎಫ್‌ಟಿ, ಆರ್‌ಟಿಜಿಎಸ್ ಹಾಗೂ ಕ್ಯೂ ಆರ್ ಕೋಡ್ ಸೌಲಭ್ಯಗಳ ಅನುಷ್ಠಾನವನ್ನು ಫೆ.12ರಂದು ಬ್ಯಾಂಕ್‌ನ ಸಭಾಂಗಣದಲ್ಲಿ ಗ್ರಾಹಕರ ಸಮಾವೇಶದಲ್ಲಿ ಉದ್ಘಾಟಿಸಲಾಯಿತು.
ದ.ಕ.ಜಿಲ್ಲಾ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಚೆಯರ್‌ಮ್ಯಾನ್ ಸಿ.ಎ ಶಾಂತರಾಮ ಶೆಟ್ಟಿ ಅವರು ಗ್ರಾಹಕರ ಸಮಾವೇಶವನ್ನು ಉದ್ಘಾಟಿಸಿದರು.

ಆರ್‌ಬಿಐ ಕಂಟ್ರೋಲ್‌ನಲ್ಲಿರುವುದರಿಂದ ತುಂಬಾ ಸ್ಕೋಪ್ ಇದೆ:
ದ.ಕ.ಜಿಲ್ಲಾ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಚೆಯರ್‌ಮ್ಯಾನ್ ಸಿ.ಎ ಶಾಂತರಾಮ ಶೆಟ್ಟಿ ಅವರು ಮಾತನಾಡಿ ಸಾಲಗಳ ವಿಳಂಬ ಆಗುವಾಗ ಸೊಸೈಟಿಯೇ ಗ್ರಾಹಕರಿಗೆ ವರದಾನವಾಗುತ್ತದೆ. ಸೊಸೈಟಿಯಿಂದ ಜನರ ಜೀವನ ಶೈಲಿ ಬದಲಾವಣೆ ಆಗಿದೆ. ಪತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ 115 ವರ್ಷದ ಇತಿಹಾಸದೊಂದಿಗೆ ಗ್ರಾಹಕರ ಕುಟುಂಬವಾಗಿದೆ. ಈ ನಿಟ್ಟಿನಲ್ಲಿ ಸೇವೆಯನ್ನು ಮೂಲೆ ಮೂಲೆಗೆ ಕೊಂಡೊಯ್ಯಲು ಶಾಖೆಗಳನ್ನು ಮಾಡುವುದು ಅಗತ್ಯ. ಅತಿ ಹೆಚ್ಚು ಸದಸ್ಯರು ಇಲ್ಲಿರುವುದರಿಂದ ಗ್ರಾಹಕರನ್ನು ಚೆನ್ನಾಗಿ ನೋಡುವ ಕೆಲಸ ಆಗಬೇಕು. ಅದಕ್ಕಾಗಿ ನಮ್ಮ ಕಾನ್‌ಫಿಡೆನ್ಸ್ ಉಳಿಸುವದು ಮುಖ್ಯ ಎಂದ ಅವರು ನೂತನ ಕಾರ್ಯನಿರ್ವಹಣಾಧಿಕಾರಿಯರು ರೂಪಿಸಿದ ಹೊಸ ಹೊಸ ಯೋಜನೆಗಳನ್ನು ಗ್ರಾಹಕರು ಸದುಪಯೋಗ ಪಡೆಯಬೇಕೆಂದರು.

ಬದಲಾವಣೆ ಆದಂತೆ ಹೊಸ ತಂತ್ರಜ್ಞಾನ ಅನುಷ್ಠಾನ ಅಗತ್ಯ:
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ಅವರು ಮಾತನಾಡಿ ತಂತ್ರಜ್ಞಾನವನ್ನು 2೦೦೦ನೇ ಇಸವಿಯಿಂದಲೇ ಬ್ಯಾಂಕ್‌ನಲ್ಲಿ ಅಳವಡಿಸಿದ್ದೇವೆ. ಆದರೆ ಬದಲಾವಣೆ ಆದಂತೆ ಹೊಸ ತಂತ್ರಜ್ಞಾನ ಅನುಷ್ಠಾನ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನವನ್ನು ಅಳವಿಡಿಸಿ ಗ್ರಾಹಕರಿಗೆ ಬೇರೆ ಬೇರೆ ರೀತಿಯ ಸೌಲಭ್ಯ ನೀಡುತ್ತಿದ್ದೇವೆ ಎಂದರು. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಅವರು ಮಾತನಾಡಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅತ್ಯಂತ ಕಟ್ಟುನಿಟ್ಟಿನ ರೂಲ್ಸ್‌ಗಳನ್ನು ಟೌನ್ ಬ್ಯಾಂಕ್‌ಗೆ ನೀಡಿದರೂ ಕರ್ನಾಟಕದಲ್ಲಿ ಟೌನ್ ಬ್ಯಾಂಕ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷ ವಿಶ್ವಾಸ್ ಶೆಣೈ ಶುಭ ಹಾರೈಸಿದರು.

ಗೌರವ:
ಬ್ಯಾಂಕ್‌ಗೆ ನೂತನ ತಂತ್ರಜ್ಞಾನ ಅಳವಡಿಸಿದ ಕಂಪೆನಿಯ ಮುಖ್ಯ ತಂತ್ರಜ್ಞ ಮಧುಸೂಧನ್ ಮತ್ತು ಬಳಗಕ್ಕೆ ಬ್ಯಾಂಕ್ ವತಿಯಿಂದ ಗೌರವ ನೀಡಲಾಯಿತು. ಬ್ಯಾಂಕ್‌ನ ಸಿಬ್ಬಂದಿ ಜ್ಯೋತಿ ವಂದಿಸಿದರು. ಬ್ಯಾಂಕ್‌ನ ನಿರ್ದೇಶಕರಾದ ಎ.ವಿ.ನಾರಾಯಣ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ರೈ, ಚಂದ್ರಶೇಖರ್ ಗೌಡ, ಮಲ್ಲೇಶ್, ಮೋಹಿನಿ, ಹೇಮಾವತಿ ಸಹಿತ ಬ್ಯಾಂಕ್‌ನ ಗ್ರಾಹಕರು ಉಪಸ್ಥಿತರಿದ್ದರು. ಬ್ಯಾಂಕ್ ಬ್ಯಾಂಕ್‌ನ ಸಿಬಂದಿ ಜ್ಯೋತಿ ವಂದಿಸಿದರು. ಉಪಮಹಾಪ್ರಬಂಧಕ ಚೇತನ್ ಉಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.

ಹೊಸ ತಂತ್ರಜ್ಞಾನದ ಉದ್ಘಾಟನೆ
ಬ್ಯಾಂಕ್‌ನಲ್ಲಿ ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿ ಕ್ಯೂ ಆರ್ ಕೋಡ್, ನೇರ ಎನ್‌ಇಎಫ್‌ಟಿ, ಆರ್‌ಟಿಜಿಎಸ್ ಸೌಲಭ್ಯಗಳ ಅನುಷ್ಠಾನವನ್ನು ಉದ್ಘಾಟಿಸಲಾಯಿತು. ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಗೌಡ ಇಚಿಲಂಪಾಡಿ ಅವರಿಗೆ ಕ್ಯೂ ಆರ್ ಕೋಡ್ ಹಸ್ತಾಂತರಿಸಲಾಯಿತು. ನೂತನವಾಗಿ ಸರಳ ಗೃಹ ಸಾಲ ಯೋಜನೆ, ಕಮರ್ಷಿಯಲ್ ಬಿಲ್ಡಿಂಗ್ ಖರೀದಿ ಸಾಲ, ಯೂಸ್ಡ್ ಕಾರ್ ಲೋನ್ ಯೋಜನೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಬಳಿಕ ಬ್ಯಾಂಕ್‌ನ ಎದುರುಗಡೆ ನೂತನವಾಗಿ ಅಳವಡಿಸಿದ ಧ್ವಜಸ್ಥಂಭವನ್ನು ಉದ್ಘಾಟಿಸಲಾಯಿತು

LEAVE A REPLY

Please enter your comment!
Please enter your name here