ಫೆ.25:ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ

0

ಪುತ್ತೂರು: ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಫೆ.25ರಂದು ಪುರುಷರಕಟ್ಟೆ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಜರಗಲಿದೆ.


ಸಂಘದ ಉಪವಿಧಿ ಸಂಖ್ಯೆ ಅಧ್ಯಾಯ-9 ರಲ್ಲಿ ಉಪನಿಯಮ ಸಂಖ್ಯೆ 21.1ರಂತೆ ಚುನಾಯಿತವಾಗಬೇಕಾದ ಸ್ಥಾನಗಳು 13 ಆಗಿವೆ. ಮೂರ್ತೆದಾರರ ಕ್ಷೇತ್ರದಿಂದ ಚುನಾಯಿತರಾಗುವ ಸ್ಥಾನಗಳಲ್ಲಿ ಶಾಂತಿಗೋಡು, ಮುಂಡೂರು, ಕೆಮ್ಮಿಂಜೆ ಗ್ರಾಮಗಳ ಮೂರ್ತೆದಾರರ ಸದಸ್ಯರುಗಳಿಂದ 2 ಸ್ಥಾನ, ನರಿಮೊಗರು, ಸರ್ವೆ, ಸವಣೂರು, ಪುಣ್ಚಪ್ಪಾಡಿ ಗ್ರಾಮಗಳ ಮೂರ್ತೆದಾರರ ಸದಸ್ಯರುಗಳಿಂದ 1 ಸ್ಥಾನ, ಬೆಳಂದೂರು, ಕಾಮಣ, ಕುದ್ಮಾರು ಗ್ರಾಮಗಳ ಮೂರ್ತೆದಾರರ ಸದಸ್ಯರುಗಳಿಂದ 1 ಸ್ಥಾನ ಹಾಗೂ ಸಾಮಾನ್ಯ ಸ್ಥಾನಗಳಲ್ಲಿ ಕಾಣಿಯೂರು, ದೋಳ್ಪಾಡಿ, ಚಾರ್ವಾಕ ಗ್ರಾಮಗಳ ಸಾಮಾನ್ಯ ಸದಸ್ಯರುಗಳಿಂದ 1 ಸ್ಥಾನ, ಬೆಳಂದೂರು, ಕಾಮಣ, ಕುದ್ಮಾರು ಗ್ರಾಮಗಳ ಸಾಮಾನ್ಯ ಸದಸ್ಯರುಗಳಿಂದ 1 ಸ್ಥಾನ, ನರಿಮೊಗರು, ಸರ್ವೆ, ಸವಣೂರು, ಪುಣ್ಚಪ್ಪಾಡಿ ಗ್ರಾಮಗಳ ಸಾಮಾನ್ಯ ಸದಸ್ಯರುಗಳಿಂದ 1 ಸ್ಥಾನ, ಸಾಮಾನ್ಯ ಸದಸ್ಯರಿಂದ ಹಿಂದುಳಿದ ವರ್ಗ ಪ್ರವರ್ಗ ಎ’ ಮೀಸಲು ಸ್ಥಾನ 1, ಸಾಮಾನ್ಯ ಸದಸ್ಯರಿಂದ ಹಿಂದುಳಿದ ವರ್ಗ ಪ್ರವರ್ಗಬಿ’ ಮೀಸಲು ಸ್ಥಾನ 1, ಸಾಮಾನ್ಯ ಸದಸ್ಯರಿಂದ ಮಹಿಳಾ ಮೀಸಲು ಸ್ಥಾನ 2, ಸಾಮಾನ್ಯ ಸದಸ್ಯರಿಂದ ಪರಿಶಿಷ್ಟ ಜಾತಿ ಮೀಸಲು ಸ್ಥಾನ 1, ಸಾಮಾನ್ಯ ಸದಸ್ಯರಿಂದ ಪರಿಶಿಷ್ಟ ಪಂಗಡ ಮೀಸಲು ಸ್ಥಾನ 1 ಆಗಿದೆ.


ಆಕಾಂಕ್ಷೆವುಳ್ಳ ಆಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲು ಪ್ರಾರಂಭದ ದಿನಾಂಕ 13-02-2024(ಪೂರ್ವಾಹ್ನ ಗಂಟೆ 10 ರಿಂದ ಮಧ್ಯಾಹ್ನ 12.30 ವರೆಗೆ) ರಂದು ರಿಟರ್ನಿಂಗ್ ಅಧಿಕಾರಿಯವರಿಗೆ ಸಂಘದ ಕಚೇರಿಯಲ್ಲಿ, ಸ್ಪರ್ಧಿಸಲು ಇಚ್ಛಿಸುವಂತಹ ಆಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ದಿನಾಂಕ 17-02-2024(ಪೂರ್ವಾಹ್ನ ಗಂಟೆ 10 ರಿಂದ ಮಧ್ಯಾಹ್ನ 12.30 ವರೆಗೆ) ರಂದು ರಿಟರ್ನಿಂಗ್ ಅಧಿಕಾರಿಯವರಿಗೆ ಸಂಘದ ಕಚೇರಿಯಲ್ಲಿ, ನಾಮಪತ್ರಗಳ ಪರಿಶೀಲನೆ ದಿನಾಂಕ 18-02-2024(ಪೂರ್ವಾಹ್ನ 11 ಗಂಟೆಗೆ) ರಿಟರ್ನಿಂಗ್ ಅಧಿಕಾರಿಯವರಿಂದ ಸಂಘದ ಕಚೇರಿಯಲ್ಲಿ, ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಆಭ್ಯರ್ಥಿಗಳ ಪಟ್ಟಿಯ ಪ್ರಕಟಣೆ ದಿನಾಂಕ 18-02-2024 ನಾಮಪತ್ರಗಳ ಪರಿಶೀಲನೆಯ ನಂತರ ರಿಟರ್ನಿಂಗ್ ಅಧಿಕಾರಿಯವರಿಂದ ಸಂಘದ ಕಚೇರಿಯಲ್ಲಿ, ಆಭ್ಯರ್ಥಿಗಳಿಂದ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ 19-02-2024(3 ಗಂಟೆಯ ಒಳಗಡೆ)ರಂದು ರಿಟರ್ನಿಂಗ್ ಅಧಿಕಾರಿಯವರಲ್ಲಿ ಸಂಘದ ಕಚೇರಿಯಲ್ಲಿ, ಸಿಂಧುತ್ವ ಹೊಂದಿರುವ ಆಭ್ಯರ್ಥಿಗಳ ಪಟ್ಟಿಯ ಪ್ರಕಟಣೆ ದಿನಾಂಕ 19-02-2024(3 ಗಂಟೆಯ ನಂತರ) ರಿಟರ್ನಿಂಗ್ ಅಧಿಕಾರಿಯವರಿಂದ ಸಂಘದ ಕಚೇರಿಯಲ್ಲಿ, ಆಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ದಿನಾಂಕ 19-02-2024(ಆಭ್ಯರ್ಥಿಗಳ ಪಟ್ಟಿ ಪ್ರಕಟಣೆ ನಂತರ) ರಂದು ರಿಟರ್ನಿಂಗ್ ಅಧಿಕಾರಿಯವರಿಂದ ಸಂಘದ ಕಚೇರಿಯಲ್ಲಿ, ಸಿಂಧುತ್ವ ಹೊಂದಿರುವ ಆಭ್ಯರ್ಥಿಗಳ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟಣೆ 21-02-2024(11 ಗಂಟೆಗೆ) ರಂದು ರಿಟರ್ನಿಂಗ್ ಅಧಿಕಾರಿಯವರಿಂದ ಸಂಘದ ಕಚೇರಿಯಲ್ಲಿ, ಮತದಾನದ ದಿನಾಂಕ ಮತ್ತು ಸಮಯ 25-02-2024, ಪೂರ್ವಾಹ್ನ 9 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ, ಅದೇ ದಿನ ಮತ ಎಣಿಕೆಯೊಂದಿಗೆ ಫಲಿತಾಂಶ ಘೋಷಣೆಯಾಗಲಿದೆ ಎಂದು ರಿಟರ್ನಿಂಗ್ ಆಫೀಸರ್ ಶೋಭಾ ಎನ್.ಎಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here