ಕೊಂಬೆಟ್ಟು ಮರಾಟಿ ಯುವ ವೇದಿಕೆ ಭಜನಾ ತಂಡದ ವಾರ್ಷಿಕೋತ್ಸವ -ಕುಣಿತ ಭಜನೋತ್ಸವ,ದುರ್ಗಾಪೂಜೆ,ಯಕ್ಷಗಾನ ಸಂಭ್ರಮ

0

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ , ಮರಾಟಿ ಯುವ ವೇದಿಕೆ ಹಾಗೂ ಯುವವೇದಿಕೆ ಭಜನಾ ತಂಡ ಕೊಂಬೆಟ್ಟು ಇದರ ನೇತೃತ್ವದಲ್ಲಿ ಭಜನಾ ತಂಡ ಇದರ ಐದರ ವಾರ್ಷಿಕೋತ್ಸವ ಪ್ರಯುಕ್ತ ಫೆ.11ರಂದು ಸಂಘದ ಸಭಾಭವನ ಕೊಂಬೆಟ್ಟುವಿನಲ್ಲಿ ಕುಣಿತ ಭಜನೋತ್ಸವ, ಸಾಮೂಹಿಕ ದುರ್ಗಾ ಪೂಜೆ ಹಾಗೂ ರಾತ್ರಿ 8.30ರಿಂದ ಯಕ್ಷಗಾನ ಬಯಲಾಟವು ಅದ್ದೂರಿಯಾಗಿ ಜರುಗಿತು.
ವಿವೇಕಾನಂದ ಕಾಲೇಜಿನ ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ಶ್ರೀಶ ಕುಮಾರ್, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್, ಮಹಮ್ಮಾಯಿ ಅಮ್ಮನವರ ಪೂಜಾ ಪಾತ್ರಿ ಧನಂಜಯ ನಾಯ್ಕ್ ಕಾನುಮೂಲೆ ಅತಿಥಿಗಳಾಗಿ ಭಾಗವಹಿಸಿ ಹಾರೈಸಿದರು.
ಈ ವೇಳೆ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಎನ್ ಎಸ್ ಭಜನಾ ತಂಡದ ತರಬೇತುದಾರ ನಾಗೇಶ್ ನಾಯ್ಕ್ ಸಾಜ , ಭಜನಾ ಸಮಿತಿ ಅಧ್ಯಕ್ಷ
ಕಾರ್ತಿಕ್ ಆರ್ಯಾಪು ಸಹಿತ ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಮರಾಟಿ ಭಜನಾ ತಂಡದ ಸದಸ್ಯರು, ಮರಾಟಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಮರಾಟಿ ಯುವ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಭಜನೋತ್ಸವ ಸಮಿತಿಯ ಸದಸ್ಯರು, ಮರಾಟಿ ಸಮಾಜ ಸೇವಾ ಸಂಘದ ಗ್ರಾಮೀಣ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಸಮಾಜ ಬಾಂಧವರು ಹಾಜರಿದ್ದರು.
ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಇದರ ಜತೆ ಕಾರ್ಯದರ್ಶಿ ಗಿರೀಶ್ ಸೊರಕೆ ಪ್ರಾಸ್ತಾವಿಕ ಮಾತನಾಡಿದರು.
ಭಜನೋತ್ಸವ ಸಮಿತಿ ಸಂಚಾಲಕ ಗಂಗಾಧರ ಕೌಡಿಚ್ಚಾರು ವರದಿ ವಾಚಿಸಿದರು.

ಸನ್ಮಾನ ಕಾರ್ಯ:
ಅಪ್ಪಣ್ಣ ನಾಯ್ಕ್ ಬಾಳೆಗುಳಿ, ಲೇಖಕರು ಹಾಗೂ ಮಹಮ್ಮಾಯಿ ಅಮ್ಮನವರ ಪೂಜಾ ಪಾತ್ರಿ ಹಾಗೂ ಭುವನೇಶ್ವರಿ ರಾಷ್ಟ್ರ ಮಟ್ಟದ ಕ್ರೀಡಾಪಟು ಇವರುಗಳನ್ನು ಸನ್ಮಾನಿಸಲಾಯಿತು.

ಮರಾಟಿ ಯುವವೇದಿಕೆ ಭಜನಾ ತಂಡದ ತೇಜಸ್, ಶ್ರೇಯಸ್ ಪ್ರಾರ್ಥನೆ ನೆರವೇರಿಸಿ , ತೇಜಸ್ ನಾಯ್ಕ್ ಮುಡಾಲಮೂಲೆ ಸ್ವಾಗತಿಸಿ, ಕಾರ್ತಿಕ್ ಮೇಗಿನ ಧನ್ಯವಾದವಿತ್ತರು.
ಸಂಜೆ 5:30 ರಿಂದ ವೇದಮೂರ್ತಿ ಸಂದೀಪ್ ಕಾರಂತ್ ನೇತೃತ್ವದಲ್ಲಿ ಸಾಮೂಹಿಕ ಶ್ರೀ ದುರ್ಗಾಪೂಜೆ ನೆರವೇರಿತು.
ಆ ಬಳಿಕ ರಾತ್ರಿ 8:00 ರಿಂದ, ಯಕ್ಷ ಗುರುಕುಲ ಇರ್ದೇ ಉಪ್ಪಳಿಗೆ ಇವರಿಂದ ಶ್ರೀ ರಾಮಕೃಷ್ಣ ಪಡುಮಲೆ ನಿರ್ದೇಶನದಲ್ಲಿ ಸುಂದರ ನಾಯ್ಕ್ ಪಾಣಾಜೆ ಇವರ ಸಂಯೋಜನೆಯಲ್ಲಿ ‘ಅಗ್ರಪೂಜೆ’ ಎಂಬ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here