ಬಡಗನ್ನೂರು: ಬಡಗನ್ನೂರು ಸ.ಹಿ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಪುನರ್ ರಚನಾ ಸಭೆಯು ಫೆ.10 ಶಾಲಾ ಸಭಾಂಗಣದಲ್ಲಿ ನಡೆಯಿತು.ಸಭೆಯು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಲೋಚನ ಎಸ್ ನಾಯ್ಕ ನೇರ್ಲಂಪಾಡಿ ರವರ ಅಧ್ಯಕ್ಷತೆಯಲ್ಲಿ ಬಡಗನ್ನೂರು ಸ.ಉ.ಹಿ ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಆಯ್ಕೆಯಾದ ನಾರಾಯಣ ರೈ ಕುದ್ಕಾಡಿ ಮಾತನಾಡಿ, ಶಾಲೆ ಒಂದು ದೇಗುಲ, ದೇಗುಲಕ್ಕೆ ಹೋಗುವಾಗ ಚಪ್ಪಲಿ ಹೊರಗಿಟ್ಟು ಹೋಗುವ ರೀತಿಯಲ್ಲಿ ರಾಜಕೀಯ ಬಿಟ್ಟು ಊರಿನ ಸರಕಾರಿ ಶಾಲೆಯನ್ನು ಅಭಿವೃದ್ಧಿ ಮಾಡೋಣ, ಶಾಲೆಗೆ ನೂರು ವರ್ಷ ತುಂಬಲು ಇನ್ನೂ ಒಂದು ವರ್ಷ ಬಾಕಿ ಇದೆ. ಶತಮಾನ ಆಚರಣೆ ಸಂದರ್ಭದಲ್ಲಿ ನೆಲಸಮ ಗೊಂಡಿರುವ ಶಾಲಾ ಕಟ್ಟಡ ನಿರ್ಮಾಣ ಮಾಡುವ ದೊಡ್ಡ ಜವಾಬ್ದಾರಿ ನಮ್ಮೆಲರದಾಗಿದೆ. ಮುಂದೆ ತಿಂಗಳಲ್ಲಿ ಒಂದು ಬಾರಿ ಸಭೆ ಸೇರಿ ಶತಮಾನೋತ್ಸವ ಮತ್ತು ಕಟ್ಟಡ ನಿರ್ಮಾಣ ಕಾರ್ಯದ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು ಮಾತನಾಡಿ, ಶಾಲಾ ಅಭಿವೃದ್ಧಿ ಬಗ್ಗೆ ಒಗ್ಗಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿ ಸಹಕಾರ ಯೋಚಿಸಿದರು.ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯ ವೈಖರಿ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯಪದವು ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಿಲು, ಮಾಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತ್ಯಾಂಪಣ್ಣ ಸಿ.ಹೆಚ್, ಹಾಗೂ ಹಿರಿಯ ವಿದ್ಯಾರ್ಥಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಸಮಿತಿ ರಚನೆ
ಅಧ್ಯಕ್ಷರಾಗಿ ಸುರೇಶ್ ರೈ ಪಳ್ಳತ್ತಾರು, ಕಾರ್ಯದರ್ಶಿಯಾಗಿ ಶಾಂಭವಿ ತಾರನಂದ ಶೆಟ್ಟಿ ಕುದ್ಕಾಡಿ ಅಯ್ಕೆ ಮಾಡಲಾಗಿದೆ.ಗೌರವಾಧ್ಯಕ್ಷರಾಗಿ ನಾರಾಯಣ ರೈ ಕುದ್ಕಾಡಿ, ಉಪಾಧ್ಯಕ್ಷ ಶ್ರೀಧರ ನಾಯ್ಕ ನೆರ್ಲಂಪಾಡಿ, ಜತೆ ಕಾರ್ಯದರ್ಶಿ ಭಾರತಿ ರೈ ಕುದ್ಕಾಡಿ, ಕೋಶಾಧಿಕಾರಿಯಾಗಿ ಸುಬ್ರಾಯ ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ಅಲ್ಲಾವುದ್ದೀನ್ ಪದಡ್ಕ, ಜತೆ ಕಾರ್ಯದರ್ಶಿಯಾಗಿ , ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಜಾ ಹರೀಶ್ ಪೂಜಾರಿ ಮೈಂದನಡ್ಕ ಇವರನ್ನು ಆಯ್ಕೆ ಮಾಡಲಾಯಿತು.ಗೌರವ ಸಲಹೆಗಾರರಾಗಿ ಶ್ರೀನಿವಾಸ್ ಭಟ್ ಸಿ.ಯಾಚ್ , ಜಯಂತ ರೈ ಕುದ್ಕಾಡಿ, ಚಂದ್ರಶೇಖರ ಆಳ್ವ ಗಿರಿಮನೆ, ಮಹಮ್ಮದ್ ಬಡಗನ್ನೂರು,ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ , ತ್ಯಾಂಪಣ್ಣ ಸಿ.ಹೆಚ್ ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ, ಮಹಾಬಲ ರೈ ಮೇಗಿನಮನೆ, ಬಾಬು ಮೂಲ್ಯ ಮೈಂದನಡ್ಕ, ಪಕೀರ ಮೈಂದನಡ್ಕ, ಭವಿಷ್ ಡಿ, ಸುನೀತ ಪಳ್ಳತ್ತಾರು, ಲತಾ ಕಟ್ಟಾವು, ಯಶೋಧ ಸೇನೆರಮಜಲು, ಕುಸುಮ ಪೇರತ್ತಡ್ಕ ಚಂದ್ರಿಕಾ ಸೋಣಗೇರಿ, ಹಮೀದ್ ಮೈಂದನಡ್ಕ, ಆಸಿಂ ಮೈಂದನಡ್ಕ ಸಿಮರ್ ಚಾಯ್ಸ್ ಮೈಂದನಡ್ಕ, ಪ್ರಸನ್ನ ರೈ ಮೇಗಿನಮನೆ ಆಯ್ಕೆ ಮಾಡಲಾಯಿತು.