ಪುತ್ತೂರು: ಮರ್ದಾಳ ಬೆಥನಿ ಜೀವನ್ ಜ್ಯೋತಿ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಸಿಟಿಯ ಆದ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ರೋಟರಿ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಮತ್ತು ರೋಟರಿ ಸದಸ್ಯರಾದ ಮೊಹಮ್ಮದ್ ಸಾದಿಕ್, ಜಾನ್ ಕುಟಿನ್ಹಾ ಹಾಗೂ ಜ್ಯೋ ಡಿ’ಸೋಜ ಇವರುಗಳು ಭೇಟಿ ನೀಡಿ ಶಾಲೆಯಲ್ಲಿರುವ ಸುಮಾರು 71 ವಿಶೇಷಚೇತನ ಮಕ್ಕಳ ಯೋಗಕ್ಷೇಮ ವಿಚಾರಿಸಿ ಮತ್ತು ಅವರ ಕಲಿಯುವಿಕೆಗಾಗಿ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಶಾಲೆಯ ಮಕ್ಕಳ ಕಲಿಯುವಿಕೆಯ ಸಹಾಯರ್ಥಕ್ಕಾಗಿ ರೂ. 10,000 ದೇಣಿಗೆ, ಹಾಗೆಯೇ ಪುತ್ತೂರಿನ ಆಕರ್ಷಣ್ ಇಂಡಸ್ಟ್ರೀಸ್ ಮಾಲಕರಾದ ಮೊಹಮ್ಮದ್ ಸಾದಿಕ್ ಇವರು 2 ಸಿಮೆಂಟ್ ಬೆಂಚ್ ಮತ್ತು 28 ಡ್ರ್ಯಾಗನ್ ಫ್ರೂಟ್ಸ್ ಸ್ಟ್ಯಾಂಡ್ ಗಳನ್ನು ಈ ಸಂಸ್ಥೆಗೆ ನೀಡಲಾಯಿತು. ವಿಶೇಷಚೇತನ ಮಕ್ಕಳ ಕಲಿಯುವಿಕೆಯ ಎಲ್ಲಾ ತರಗತಿಗಳಿಗೆ ಭೇಟಿ ನೀಡಿ, ಸದ್ರಿ ಜವಾಬ್ದಾರಿ ನೋಡಿಕೊಳ್ಳುವ ಮತ್ತು ಶಿಕ್ಷಕರನ್ನು ಅಭಿನಂದಿಸಿದರು.