ಪುತ್ತೂರು: ಒತ್ತಡದ ಕೆಲಸದೊಂದಿಗೆ ಆಟೋಟ ಅಗತ್ಯವಾಗಿಬೇಕು. ಇದು ತಮ್ಮ ಜ್ಞಾನವನ್ನು ವೃದ್ಧಿಸುತ್ತದೆ ಎಂದು ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಬಿ.ಪುರಂದರ ಭಟ್ ಅವರು ಹೇಳಿದರು.
ಪುತ್ತೂರು ಅನುರಾಗ ವಠಾರದಲ್ಲಿ ಫೆ.11ರಂದು ನಡೆದ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರಿಗೆ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಹಾಗು ಅವಲಂಬಿತರ ಅಟೋಟ ಸ್ಪರ್ಧೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಣ್ಣ ಮಕ್ಕಳು ಹೊಟ್ಟೆ ತುಂಬಿದ ಕೂಡಲೇ ಅವರಷ್ಟಕ್ಕೆ ಆಟವಾಡಲು ಆರಂಭಿಸುತ್ತಾರೆ. ಬೆಳೆದಂತೆ ಮಕ್ಕಳು ಅದನ್ನು ಮರೆಯುತ್ತಾರೆ. ಆರೆ ಕಾರ್ಮಿಕರಾದ ನಾವು ಒಂದು ಕುಟುಂಬವಿದ್ದಂತೆ ನಾವೆಲ್ಲರು ಒಟ್ಟು ಸೇರಿ ಆಟೋಟ ಸ್ಪರ್ಧೆಯನ್ನು ಮಾಡುವ ಮೂಲಕ ಸಂತೋಷ ಹಾಗೂ ಜ್ಞಾನವನ್ನು ವೃದ್ಧಿಸಬಹುದು ಎಂದರು. ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಅವರು ಮಾತನಾಡಿ ಕಟ್ಟಡ ಕಾರ್ಮಿಕರಿಗೆ 10 ವರ್ಷಗಳ ಹಿಂದೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದೀಗ ಮತ್ತೆ ಅದನ್ನು ಮುಂದುವರಿಸಿದ್ದೇವೆ ಎಂದ ಅವರು ಫೆ.18ರಂದು ಕಾರ್ಮಿಕರಿಗೆ ಮತ್ತು ಕಾರ್ಮಿಕರ 10ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ಹಾಗು ಅವಲಂಬಿತರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು. ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಸಂಘದ ಗೌರವ ಸಲಹೆಗಾರ ಎಂ.ಶೇಷಪ್ಪ ಕುಲಾಲ್ ಶುಭ ಹಾರೈಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಮುಕ್ವೆ ಸ್ವಾಗತಿಸಿ, ತೇಜಕುಮಾರ್ ವಂದಿಸಿದರು. ಈಶ್ವರ ನಾಯ್ಕ್, ಚೆನ್ನಪ್ಪ ಮಚ್ಚಿಮಲೆ, ಸುಬ್ರಹ್ಮಣ್ಯ ಕಬಕ ಅತಿಥಿಗಳನ್ನು ಗೌರವಿಸಿದರು.