ಪಲ್ಲತ್ತಡ್ಕ ಹೊಸಮ್ಮ ‌ದೈವಸ್ಥಾನದಲ್ಲಿ ಕುಂಭ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ

0

 ಕೆಯ್ಯೂರು:ಮಾಡಾವು ಪಲ್ಲತಡ್ಕ ಶ್ರಿ ಹೊಸಮ್ಮ ದೈವಸ್ಥಾನದಲ್ಲಿ ಫೆ.13ರಂದು ಕುಂಭ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆಯು ನಡೆಯಿತು. ಈ ಸಂದರ್ಭದಲ್ಲಿ ಹೊಸಮ್ಮ ದೈವದ ನೇಮೋತ್ಸವದ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ನೇರವೆರಿಸಲಾಯಿತು.ನಂತರ ನೂರಾರು ಭಕ್ತಾಧಿಗಳು ಪಾಲ್ಗೊಂಡು, ಮಹಾಪೂಜೆ , ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅದ್ಯಕ್ಷ ಎಸ್.ಬಿ.ಜಯರಾಮರೈ ಬಳಜ್ಜ, ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪಲ್ಲತ್ತಡ್ಕ ಕುಟುಂಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here