ಬೆಂಗಳೂರು:ಮಾಸಿಕ ಗೌರವಧನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು ಹಾಗೂ ಗೌರವಧನ ವಿತರಣೆಯಲ್ಲಿನ ವಂಚನೆ ತಡೆಯಲು ಆರ್ಸಿಎಚ್ ಪೋರ್ಟಲ್ನ್ನು ಡೀಲಿಂಕ್ ಮಾಡುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರುನಲ್ಲಿ ಹೋರಾಟ ನಡೆಸಿದ್ದಾರೆ.
ಎಐಯುಟಿಯುಸಿ ನೇತೃತ್ವದಲ್ಲಿ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪುತ್ತೂರು,ಕಡಬದ ಪ್ರಮುಖರು ಸೇರಿದಂತೆ ಸಾವಿರಾರು ಮಂದಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದ ಎಲ್ಲ ಜನರಿಗೆ ಗ್ಯಾರಂಟಿ ನೀಡುವ ಸರಕಾರಕ್ಕೆ ಕೇವಲ 42 ಸಾವಿರ ಜನರಿಗೆ ಗ್ಯಾರಂಟಿ ನೀಡುವುದು ಅಸಾಧ್ಯವೇ?.ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮುಖಂಡರನ್ನು ಸರಕಾರ ಹಲವು ಬಾರಿ ಸಭೆ ಕರೆದರೂ ಯಾವುದೇ ಪ್ರಯೋಜನವಾಗಿಲ್ಲ.ಡಿಜಿಟಲ್ ಇಂಡಿಯಾ ಎಂದು ಹೇಳಲಾಗುತ್ತದೆ.ಆದರೆ ಆಶಾ ಕಾರ್ಯಕರ್ತೆಯರಿಗೆ ಕೊಟ್ಟಿರುವ ಮೊಬೈಲ್ ಫೋನ್ಗೆ ಸರಿಯಾದ ನೆಟ್ವರ್ಕ್ ಇಲ್ಲ.ಆರ್ಸಿಎಚ್ ಪೋರ್ಟಲ್ನಿಂದ ಆಗುತ್ತಿರುವ ಮೋಸಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು.
ಲೇಖಕಿ ರೂಪಾ ಹಾಸನ ಮಾತನಾಡಿ, ಱಹಲವು ವರ್ಷದಿಂದ ಆಶಾ ಕಾರ್ಯಕರ್ತೆಯರು ಕಡಿಮೆ ವೇತನದೊಂದಿಗೆ ಹೆಚ್ಚು ಕೆಲಸ ಮಾಡಿದ್ದರ ಪರಿಣಾಮವಾಗಿ ಆರೋಗ್ಯ ಇಲಾಖೆಯಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿವೆ.ಆಶಾ ಕಾರ್ಯಕರ್ತೆಯರಿಗೆ ಸರಕಾರ ನೀಡುತ್ತಿರುವ ಹಣದಿಂದ ಗೌರವಧನಕ್ಕೆ ಅವಮಾನವಾದಂತೆ ಕಾಣುತ್ತಿದೆ.ಹೀಗಾಗಿ ಕೂಡಲೇ ಅವರ ಗೌರವಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.ಎಐಯುಟಿಯುಸಿ ಅಧ್ಯಕ್ಷ ಕೆ.ರಾಧಾಕೃಷ್ಣನ್, ಎಸ್ಯುಸಿಐಸಿ ಕಾರ್ಯದರ್ಶಿ ಕೆ.ಉಮಾ, ಮೆಡಿಕಲ್ ಸರ್ವಿಸ್ ಸೆಂಟರ್ನ ಉಪಾಧ್ಯಕ್ಷೆ ಡಾ.ಸುಧಾ ಕಾಮತ್, ಸಂಘದ ಕಾರ್ಯದರ್ಶಿ ಸೋಮಶೇಖರ್ ಯಾದಗಿರಿ, ಎಐಎಂಎಸ್ಎಸ್ ಅಧ್ಯಕ್ಷೆ ಎಂ.ಎನ್. ಮಂಜುಳಾ, ಹೋರಾಟಗಾರರ ಉಗ್ರನರಸಿಂಹೇಗೌಡ, ಪ್ರಮೀಳಾ, ಕೆ.ವಿ.ಭಟ್ ಸೇರಿದಂತೆ ಸಾವಿರಾರು ಮಂದಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪುತ್ತೂರಿನಿಂದ ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರಾದ ಶೋಭಾ,ಅಮಿತಾಹರೀಶ್ ಸೇರಿದಂತೆ ಹಲವು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ
ಆಶಾ ಕಾರ್ಯಕರ್ತೆಯರಿಗೆ ಮಾಸಿಕ 7 ಸಾವಿರ ರೂ.ನೇರ ನಗದು ವರ್ಗಾವಣೆ
ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಖಾತ್ರಿಯಾಗಿ ಪಾವತಿಯಾಗುತ್ತಿದ್ದ ರೂ.5 ಸಾವಿರದ ಬದಲು ರೂ.7 ಸಾವಿರ ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ಅಹವಾಲುಗಳನ್ನು ಆಲಿಸಿದ ಸಚಿವರು, ಆಶಾ ಕಾರ್ಯಕರ್ತೆಯರ ಪರ ಸರ್ಕಾರವಿದೆ ಎಂದು ಹೇಳಿ,ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆಶಾ ಕಾರ್ಯಕರ್ತೆಯರ