ಫೆ 16:ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿ 108 ಸೂರ್ಯನಮಸ್ಕಾರ ಹಾಗೂ 108 ಅಗ್ನಿಹೋತ್ರ

0

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ದ. ಕ ಜಿಲ್ಲೆ ಪುತ್ತೂರು ತಾಲೂಕು ವತಿಯಿಂದ ಫೆ.16 ರಂದು ರಥಸಪ್ತಮಿ ಪ್ರಯುಕ್ತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗ ಪ್ರಾತಃಕಾಲ 4:30 ರಿಂದ 7:00 ರ ವರೆಗೆ 108 ಸೂರ್ಯ ನಮಸ್ಕಾರ ಮತ್ತು 108 ಅಗ್ನಿಹೋತ್ರವನ್ನು ಹಮ್ಮಿಕೊಳ್ಳಲಾಗಿದೆ.

ಅದೇ ದಿನ ಶ್ರೀ ಷಣ್ಮುಖ ಶ್ರೀ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನ ಕೆಮ್ಮಿಂಜೆ ಇಲ್ಲಿ ಮುಂಜಾನೆ 7:00 ರಿಂದ ಸಾಯಂಕಾಲ 6:00 ಗಂಟೆಯ ವರೆಗೆ ಅಖಂಡ ಸೂರ್ಯ ನಮಸ್ಕಾರ ನಡೆಯಲಿದೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಲ್ಲಿ ತರಬೇತಿ ಪಡೆದ ಯೋಗಪಟುಗಳು, SPYSS ನ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here