ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಇದರ ಭೂಮಿಕ ಒಕ್ಕೂಟ ಕೆಮ್ಮಿಂಜೆ ವಲಯದ ತ್ರೈಮಾಸಿಕ ಸಭೆಯು ಕೆಮ್ಮಿಂಜೆ ದ.ಕ.ಜಿ.ಪ.ಉ.ಪ್ರಾ ಶಾಲೆಯಲ್ಲಿ ಫೆ.11ರಂದು ನಡೆಯಿತು. ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಯೋಜನೆಯಿಂದ ಸಿಗುವ ಸಾಲ ಸೌಲಭ್ಯ, ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮೇಲ್ವಿಚಾರಕಿ ಪುಷ್ಪಲತಾ, ಸೇವಾ ಪ್ರತಿನಿಧಿ ಜಯಶ್ರೀ, ಒಕ್ಕೂಟದ ಅಧ್ಯಕ್ಷ ಚೇತನ್, ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.