ಇಕ್ರಾ ಇಂಟರ್ ನ್ಯಾಷನಲ್ ಸ್ಕೂಲ್ ನ ವಾರ್ಷಿಕ ಕ್ರೀಡೋತ್ಸವ

0

ಪುತ್ತೂರು: ನಗರದ ದರ್ಬೆಯಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಸ್ಕೂಲ್ ನ ಶಾಲಾ ವಾರ್ಷಿಕ ಕ್ರೀಡೋತ್ಸವವು ಫೆ. 14ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟವನ್ನು 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿನಿಯರು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಇಕ್ರಾ ಇನ್ಸ್ಟಿಟ್ಯೂಟ್ ನ ರೀಜನಲ್ ಮ್ಯಾನೇಜರ್ ಅಪ್ತಾಫ್, ಶುಂಠಿಕೊಪ್ಪ ಬ್ರಾಂಚ್ ನ ಹೆಡ್ ನಿಶಾದ್ ರವರು ಭಾಗವಹಿಸಿದ್ದರು.

ಬಳಿಕ‌ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಮಹಿಳೆಯರಿಗೆ ಸಂಗೀತ ಕುರ್ಚಿ, ಗಂಡಸರಿಗೆ ಹಗ್ಗಜಗ್ಗಾಟ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಾದ ಹೈಫಾ ಫಾತಿಮಾ, ಸಾಜಿದಾ, ಜಝಾ ಫಾತಿಮಾ ಸ್ವಾಗತಿಸಿದರು. ವಿದ್ಯಾರ್ಥಿ ಮುಬಶೀರ್ ಸುಲ್ತಾನ್, ಅಮ್ನ ಶಮಾ, ಆಯಿಷಾ ರಿಝಾ, ಕಿರಾಅತ್ ಪಠಿಸಿದರು. ಮನ್ಹ ಹಾಗೂ ಮುನಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here