ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ‘ನೂರೇ ಅಜ್ಮೀರ್’ ಬೃಹತ್ ಆಧ್ಯಾತ್ಮಿಕ ಸಂಗಮ

0

ಒಳಿತಿನ ಕ್ಷೇತ್ರಗಳಲ್ಲಿ ಮಾತ್ರ ತೊಡಗಿಸಿಕೊಳ್ಳಿ-ವಲಿಯುದ್ದೀನ್ ಫೈಝಿ

ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ‘ನೂರೇ ಅಜ್ಮೀರ್’ ಬೃಹತ್ ಆಧ್ಯಾತ್ಮಿಕ ಸಂಗಮ ಫೆ.10ರಂದು ರೆಂಜಲಾಡಿಯಲ್ಲಿ ನಡೆಯಿತು.
ಮಜ್ಲಿಸ್‌ಗೆ ನೇತೃತ್ವ ನೀಡಿದ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಮಾತನಾಡಿ ಮರಣ ನಮ್ಮ ಬೆನ್ನ ಹಿಂದೆ ಹಿಂಬಾಲಿಸುತ್ತಿರುವಾಗ ನಾವು ಅನವಶ್ಯಕವಾದ ಕ್ಷೇತ್ರಗಳಲ್ಲಿ ಸಮಯ ಕಳೆಯದೇ ಒಳಿತಿನ ಕ್ಷೇತ್ರಗಳಲ್ಲಿ ಮಾತ್ರ ಸಮಯ ವಿನಿಯೋಗಿಸಬೇಕು, ಆಧ್ಯಾತ್ಮಿಕ ಮಜ್ಲಿಸ್‌ಗಳಲ್ಲಿ ಭಾಗವಹಿಸುವ ಮೂಲಕ ಹೃದಯವನ್ನು ಶುದ್ದಿಗೊಳಿಸಬೇಕು ಎಂದು ಹೇಳಿದರು.

ಸಣ್ಣ ಊರಿನಲ್ಲಿ ದೊಡ್ಡ ಕಾರ್ಯಕ್ರಮ-ಇನಾಯತ್
ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಮಾತನಾಡಿ ರೆಂಜಲಾಡಿ ಎನ್ನುವ ಸಣ್ಣ ಊರಿನಲ್ಲಿ ದೊಡ್ಡ ಉದ್ದೇಶವನ್ನಿಟ್ಟುಕೊಂಡು ಕಾರ್ಯಕ್ರಮ ಆಯೋಜನೆ ಮಾಡಿರುವ ಹುಸೈನ್ ದಾರಿಮಿಯವರ ಜೊತೆ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.

ನಿಮ್ಮೊಂದಿಗೆ ನಾನಿದ್ದೇನೆ-ಖಾದರ್ ಹಾಜಿ
ಉದ್ಯಮಿ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ ಮಾತನಾಡಿ ರೆಂಜಲಾಡಿಯಲ್ಲಿ ಹುಸೈನ್ ದಾರಿಮಿ ನೇತೃತ್ವದಲ್ಲಿ ಆಗುತ್ತಿರುವ ಆರ್.ಐ.ಸಿ ವಿದ್ಯಾಸಂಸ್ಥೆಗೆ ಸರ್ವ ವಿಧದ ಸಹಕಾರ ನೀಡಲು ನಾನು ಸಿದ್ದನಿದ್ದು ನಿಮ್ಮ ಹಿಂದೆಯಲ್ಲ ಮುಂದೆ ನಾನಿದ್ದೇನೆ, ನೀವು ಧೈರ್ಯದಿಂದ ಮುನ್ನುಗ್ಗಿ ನಿಮ್ಮ ಉದ್ದೇಶ ಈಡೇರುತ್ತದೆ ಎಂದು ಹೇಳಿದರು.

ಉದ್ಯಮಿ ಅಹ್ಮದ್ ಹಾಜಿ ಆಕರ್ಷಣ್, ಎಸ್.ಬಿ ಮಹಮ್ಮದ್ ದಾರಿಮಿ, ತಬೂಕ್ ದಾರಿಮಿ, ಹಮೀದ್ ದಾರಿಮಿ, ಅನೀಸ್ ಕೌಸರಿ, ಇರ್ಷಾದ್ ದಾರಿಮಿ ಮೊದಲಾದವರು ಮಾತನಾಡಿದರು.

ಆರ್.ಐ.ಸಿ ನನ್ನ ಬಹುಕಾಲದ ಕನಸು:
ಆರ್.ಐ.ಸಿ ಮುಖ್ಯಸ್ಥ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ರೆಂಜಲಾಡಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭ ಮಾಡಬೇಕೆನ್ನುವುದು ನನ್ನ ಬಹು ಕಾಲದ ಕನಸು. ನಮ್ಮೂರಿನಲ್ಲಿ ಸಂಸ್ಥೆ ಪ್ರಾರಂಭಿಸಿ 10 ಮಕ್ಕಳಿಗಾದರೂ ಶಿಕ್ಷಣ ನೀಡಬೇಕೆನ್ನುವ ಉದ್ದೇಶ ನನ್ನದು. ಈಗಾಗಲೇ ಕಟ್ಟಡದ ಕಾಮಗಾರಿ ಅರ್ದ ಪೂರ್ತಿಗೊಂಡಿದ್ದು ಅದನ್ನು ಪೂರ್ತಿಗೊಳಿಸಬೇಕಾದರೆ ದಾನಿಗಳ ಸಹಕಾರ ಬೇಕಾಗಿದೆ. ಎಷ್ಟೇ ಕಷ್ಟ ಆದರೂ ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಎನ್ನುವ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಗುರಿ ಇದೆ. ಎಲ್ಲರ ಸಹಕಾರ ಕೋರುತ್ತಿದ್ದೇನೆ ಎಂದು ಹೇಳಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ಲತೀಫ್ ಗುರುಪುರ, ಎಲ್.ಟಿ ರಝಾಕ್ ಹಾಜಿ, ಆದಂ ಹಾಜಿ ಕಮ್ಮಾಡಿ, ಯೂಸುಫ್ ಗೌಸಿಯಾ, ರಫೀಕ್ ಹಾಜಿ ಗಂಡಿಬಾಗಿಲು, ಯೂಸುಫ್ ಹಾಜಿ ಕೈಕಾರ, ವಿ.ಎಚ್.ಎ ಶಕೂರ್ ಹಾಜಿ, ಅಬೂಬಕ್ಕರ್ ಹಾಜಿ, ಸಾಬು ಹಾಜಿ ಗಟ್ಟಮನೆ, ಅಬ್ಬಾಸ್ ಮದನಿ, ಉಸ್ಮಾನ್ ಹಾಜಿ, ಕೆ.ಕೆ ಹಾಜಿ, ಅಬ್ದುಲ್ಲ ಹಾಜಿ ಮುಕ್ವೆ, ಲತೀಫ್ ಹಾಜಿ, ಮಮ್ಮಾಲಿ ಹಾಜಿ ಬೆಳ್ಳಾರೆ, ಸೀದಿ ಹಾಜಿ, ಅನ್ವರ್ ಮುಸ್ಲಿಯಾರ್, ಮುಸ್ತಫಾ ಸುಳ್ಯ, ಹುಸೈನಾರ್ ಹಾಜಿ ಸಂತೋಷ್, ಅಝೀಝ್ ಬಪ್ಪಳಿಗೆ, ಅಬ್ದುರ್ರಹ್ಮಾನ್ ಹಾಜಿ ಬಾಳಾಯ, ಕೆಎಂಎ ಕೊಡುಂಗಾಯಿ, ಮಹಮ್ಮದ್ ಅಮಾನಿ, ಮಹಮ್ಮದ್ ಹಾಜಿ ವೀರಮಂಗಲ ಮತ್ತಿತರರು ಉಪಸ್ಥಿತರಿದ್ದರು. ನೂರೇ ಅಜ್ಮೀರ್ ಮಜ್ಲಿಸ್‌ಗೆ ಮೊದಲು ರೆಂಜಲಾಡಿ ಮಸೀದಿ ಖತೀಬ್ ರಫೀಕ್ ಫೈಝಿ ಮಾಡನ್ನೂರು ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಿತು.

ಸ್ವಾಗತ ಸಮಿತಿ ವೇರ್‌ಮೆನ್ ಉಮ್ಮರ್ ಸುಲ್ತಾನ್ ರೆಂಜಲಾಡಿ, ಜನರಲ್ ಕನ್ವೀನರ್ ಪಿ.ಕೆ ಮಹಮ್ಮದ್ ಕೂಡುರಸ್ತೆ ಹಾಗೂ ಪದಾಧಿಕಾರಿಗಳು ಸದಸ್ಯರು ಮತ್ತು ರೆಂಜಲಾಡಿ ಮತ್ತು ಕೂಡುರಸ್ತೆ ಜಮಾಅತರು ಸಹಕರಿಸಿದರು. ಕೊನೆಯಲ್ಲಿ ಸಾವಿರಾರು ಮಂದಿಗೆ ಅನ್ನದಾನ ನಡೆಯಿತು. ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು. ಫೆ.9ರಂದು ಅಬ್ದುಸ್ಸಮದ್ ದಾರಿಮಿ ಕೊಳತ್ತರ ಮತ್ತು ಬಳಗದಿಂದ ಧಾರ್ಮಿಕ ಕಥಾ ಪ್ರಸಂಗ ನಡೆಯಿತು.

LEAVE A REPLY

Please enter your comment!
Please enter your name here