ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ಹಗಲು ಉತ್ಸವ

0

ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ವಾರ್ಷಿಕ ಜಾತ್ರಾ ಕೂಟದ 2ನೇ ದಿನವಾದ ಫೆ.15ರಂದು ಶ್ರೀ ದೇವರ ವಿಗ್ರಹದ 148ನೇ ವರ್ಷದ ಪ್ರತಿಷ್ಠಾ ದಿನವೂ ಆಗಿದ್ದು, ಈ ಸಂದರ್ಭ ಹಗಲು ಉತ್ಸವ ಸಹಿತ ಹಲವು ಧಾರ್ಮಿಕ ವಿಧಿ-ವಿಧಾನಗಳು ನಡೆಯಿತು.


ಬೆಳಗ್ಗೆ ಹತ್ತು ಸಮಸ್ತರಿಂದ ಶ್ರೀ ದೇವತಾ ಪ್ರಾರ್ಥನೆ, ಗಂಗಾಭಿಷೇಕ, ಮಹಾ ಪಂಚಾಮೃತಭಿಷೇಕ, ಶತಕಲಷಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ ಬಳಿಕ ಶ್ರೀ ದೇವರು ಯಜ್ಞಕ್ಕೆ ಚಿತ್ತೈಸುವುದು, ಸಂಜೆ ಲಘು ಪೂರ್ಣಾಹುತಿ, ಯಜ್ಞಾರಾತಿ, ಮಹಾಬಲಿ, ಹಗಲು ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು.ನಾಗರಾಜ ಭಟ್, ಕೆ.ಅನಂತರಾಯ ಕಿಣಿ, ಎಂ. ಆರ್. ಶೆಣೈ, ಕೆ. ದೇವಿದಾಸ ಭಟ್ ಸೇರಿದಂತೆ ಸಮುದಾಯ ಬಾಂಧವರು ಉಪಸ್ಥಿತರಿದ್ದರು. ಅರ್ಚಕರಾದ ರವೀಂದ್ರ ಭಟ್, ನರಸಿಂಹ ಭಟ್, ಸುಬ್ರಹ್ಮಣ್ಯ ಭಟ್ ಪೂಜಾ ವಿಧಿ ವಿಧಾನ ನಡೆಸಿದ್ದು, ಎಸ್. ಶ್ರೀನಿವಾಸ ಭಟ್ ಸಹಕರಿಸಿದರು.

LEAVE A REPLY

Please enter your comment!
Please enter your name here