ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ

0


ಉಪ್ಪಿನಂಗಡಿ : ಯೋಗ ನಮ್ಮ ಸಂಸ್ಕ್ರತಿಯನ್ನು ಬಿಂಬಿಸುತ್ತದೆ. ಪದ್ಮ ಪುರಾಣದ ಪ್ರಕಾರ,ರಥಸಪ್ತಮಿಯ ದಿನದಂದು ಮೊದಲ ಬಾರಿಗೆ ಸೂರ್ಯನ ಕಿರಣಗಳು ಭೂಮಿಯ
ಮೇಲೆ ಬಿದ್ದವು ಎಂದು ನಂಬಲಾಗಿದೆ ಆದ್ದರಿಂದ ರಥಸಪ್ತಮಿಯ ದಿನವನ್ನು ಸೂರ್ಯದೇವರಿಗೆ ಅರ್ಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಫೆ.16ರಂದು ರಥಸಪ್ತಮಿಯ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರವು ಸಂಸ್ಥೆಯ ದೈಹಿಕ ಶಿಕ್ಷಣ ಹಾಗೂ ಯೋಗ ಶಿಕ್ಷಕಿ ವಿದ್ಯಾ ಇವರ ಮಾರ್ಗದರ್ಶನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಗುರು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here