ಪುತ್ತೂರು : ವಿವೇಕಾನಂದ ಸೆಂಟ್ರಲ್ ಶಾಲೆಯ ಸ್ಕೌಟ್/ಗೈಡ್ ಹಾಗೂ ಇತರ ವಿದ್ಯಾರ್ಥಿಗಳಿಗಾಗಿ “ನಕ್ಷತ್ರ ವೀಕ್ಷಣೆ ” ಕಾರ್ಯಕ್ರಮವನ್ನು ಫೆ.14ರಂದು ಆಯೋಜಿಸಲಾಯಿತು.
ನಕ್ಷತ್ರ ವೀಕ್ಷಣೆಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಕ್ಷತ್ರ ವೀಕ್ಷಣಾ ತಜ್ಞ, ಖ್ಯಾತ ಬರಹಗಾರ, ಉತ್ತಮ ವಾಗ್ಮಿ, ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಎ.ಪಿ ರಾಧಾಕೃಷ್ಣ ಬ್ರಹ್ಮಾಂಡದ ಸಂರಚನೆ, ನಕ್ಷತ್ರಗಳ ಮೂಲಕ ದಿಕ್ಕುಗಳನ್ನು ಗುರುತಿಸುವುದು, ಗ್ರಹಗಳು ಹಾಗೂ ಅವುಗಳ ಉಪಗ್ರಹಗಳ ಬಗೆಗೆ ವಿಸ್ತಾರವಾದ ಮಾಹಿತಿಯನ್ನು ದೂರದರ್ಶಕದ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಸಂತಿ ಕೆ, ಸಂಚಾಲಕ ಭರತ್ ಪೈ, ಪ್ರಾಂಶುಪಾಲೆ ಸಿಂಧು.ವಿ.ಜಿ ,ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಹಾಗೂ ಗೈಡ್ ಕ್ಯಾಪ್ಟನ್ ಪ್ರಫುಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.