ಕೆಯ್ಯೂರು: ಕುಡಿಯುವ ನೀರಿನ ದುರ್ಬಳಕೆ-ಗ್ರಾಪಂನಿಂದ ಕಾಲನಿಯಲ್ಲಿ ರಿಯಾಲಿಟಿ ಚೆಕ್

0

ಪುತ್ತೂರು: ಕೆಯ್ಯೂರು ಗ್ರಾಪಂ ವ್ಯಾಪ್ತಿಯ ದೇವಿನಗರ ಜನತಾ ಕಾಲನಿಯ ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗ್ತಾ ಇಲ್ಲ ಎಂದು ಕಾಲನಿ ನಿವಾಸಿಗಳ ದೂರಿನ ಮೇರೆಗೆ ಕೆಯ್ಯೂರು ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಕಾಲನಿ ಮನೆಗಳಿಗೆ ತೆರಳಿ ರಿಯಾಲಿಟಿ ಚೆಕ್ ನಡೆಸಿದರು. ಈ ವೇಳೆ ಕೆಲವೊಂದು ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ನಳ್ಳಿ ಸಂಪರ್ಕ ಇರುವುದು ಬೆಳಕಿಗೆ ಬಂದಿದ್ದು ಅವುಗಳ ಸಂಪರ್ಕವನ್ನು ಕಡಿತಗೊಳಿಸಿ ಒಂದು ಮನೆಗೆ ಒಂದೇ ನಳ್ಳಿ ನೀರಿನ ಸಂಪರ್ಕವನ್ನು ಮಾಡಲು ಕ್ರಮ ಕೈಗೊಳ್ಳಲಾಯಿತು. ಈ ರೀತಿಯಾಗಿ ಒಂದಕ್ಕಿಂತ ಹೆಚ್ಚು ನಳ್ಳಿ ನೀರಿನ ಸಂಪರ್ಕ ಇದ್ದ ಮನೆಯವರಿಗೆ ಎಚ್ಚರಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಧರ್ಮಣ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here