ಕೊಣಾಲು: ಒಕ್ಕಲಿಗ ಸ್ವ-ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

0

ನೆಲ್ಯಾಡಿ: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಕೊಣಾಲು ಇದರ ಸಂಯುಕ್ತ ಆಶ್ರಯದಲ್ಲಿ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಕೊಣಾಲು ಇದರ ಪದಗ್ರಹಣ ಸಮಾರಂಭ ಫೆ.15ರಂದು ಕೊಣಾಲು ಗ್ರಾಮದ ಡೆಬ್ಬೇಲಿ ನೋಣಯ್ಯ ಗೌಡರ ಮನೆಯಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಡಿ.ವಿ.ಮನೋಹರ ಗೌಡ ಮಾತನಾಡಿ, ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸಂಘದ ಪ್ರಾಯೋಜಕತ್ವದಲ್ಲಿ 2013ರ ದಶಂಬರ್ ತಿಂಗಳಿನಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಆರಂಭಗೊಂಡಿದೆ. ಪ್ರಸ್ತುತ ಸಂಘವು ದಶಮಾನೋತ್ಸವದ ಹೊಸ್ತಿಲಲ್ಲಿ ಇದ್ದು ದಶಮಾನೋತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ವರ್ಷ ಪ್ರತಿ ತಿಂಗಳೂ ನಿರಂತರ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ರಕ್ತದಾನ, ನೇತ್ರದಾನ ನೋಂದಾವಣೆ ಶಿಬಿರ, ಸಾಧಕರಿಗೆ ಗೌರವಾರ್ಪಣೆ, ಊರ ಗೌಡರಿಗೆ, ನಾಟಿವೈದ್ಯರಿಗೆ ಸನ್ಮಾನ ಆಯೋಜಿಸಲಾಗಿದೆ. 2025ರ ಜನವರಿಯಲ್ಲಿ ದಶಮಾನೋತ್ಸವ ಸಮಾರಂಭ ನಡೆಯಲಿದೆ ಎಂದರು.

ಒಕ್ಕಲಿಗ ಗೌಡ ಸಮುದಾಯ ಪುತ್ತೂರು ತಾಲೂಕಿನಲ್ಲಿ ಬಲಿಷ್ಠ ಸಮುದಾಯವಾಗಿದೆ. ಜನಸಂಖ್ಯೆಯಲ್ಲೂ ಒಕ್ಕಲಿಗರು ಪ್ರಥಮ ಸ್ಥಾನದಲ್ಲಿದ್ದಾರೆ. ಆದರೆ ಒಕ್ಕಲಿಗರಲ್ಲಿ ನಾಯಕತ್ವದ ಕೊರತೆ ಕಾಣುತ್ತಿದೆ. ಆದ್ದರಿಂದ ಸ್ವಸಹಾಯ ಸಂಘಗಳ ಮೂಲಕ ಸಂಘಟನೆ, ನಾಯಕತ್ವ ಗುಣ ಬೆಳೆಸಲಾಗುತ್ತಿದೆ. ಪ್ರಸ್ತುತ 1 ಸಾವಿರ ಸ್ವಸಹಾಯ ಸಂಘಗಳಿದ್ದು ಇದರಲ್ಲಿ 8900 ಸದಸ್ಯರಿದ್ದಾರೆ. ರೂ.3.62 ಕೋಟಿಗೂ ಹೆಚ್ಚು ಉಳಿತಾಯವಾಗಿದ್ದು 3.58 ಕೋಟಿ ರೂ.,ಸಾಲ ವಿತರಣೆಯಾಗಿದೆ. ಎ ಗ್ರೇಡ್‌ನಲ್ಲಿರುವ ತಂಡದ ಸದಸ್ಯನಿಗೆ ರೂ.60 ಸಾವಿರದ ತನಕ ಸಾಲ ನೀಡಲಾಗುತ್ತಿದೆ. ಪುತ್ತೂರಿನಲ್ಲಿ 1 ಕೋಟಿ ರೂ.ಮೌಲ್ಯದ ಸ್ವಂತ ಕಟ್ಟಡವಿದ್ದು ಈ ಕಟ್ಟಡದ ಮೇಲ್ಭಾಗದಲ್ಲಿ ದಶಮಾನೋತ್ಸವದ ಸವಿನೆನಪಿಗಾಗಿ 30 ಲಕ್ಷ ರೂ.ವೆಚ್ಚದ ಸಭಾಭವನ ನಿರ್ಮಾಣವಾಗುತ್ತಿದೆ ಎಂದು ಮನೋಹರ ಗೌಡ ತಿಳಿಸಿದರು.

ಅತಿಥಿಯಾಗಿದ್ದ ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ನಿರ್ದೇಶಕ ರವಿಚಂದ್ರ ಹೊಸವೊಕ್ಲು ಅವರು ಮಾತನಾಡಿ, ಉಳಿತಾಯ, ಸಾಲವಿತರಣೆಯೊಂದೇ ಸ್ವಸಹಾಯ ಸಂಘಗಳ ಉದ್ದೇಶವಲ್ಲ, ವ್ಯಕ್ತಿತ್ವ ವಿಕಸನ, ಸಂಸ್ಕಾರಯುತ ಶಿಕ್ಷಣಕ್ಕೆ ಬೇಕಾದ ತರಬೇತಿಯೂ ನೀಡಲಾಗುತ್ತದೆ ಎಂದರು. ಇನ್ನೋರ್ವ ಅತಿಥಿ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ ಕೆಯ್ಯೂರು ಅವರು ಮಾತನಾಡಿ, ತಾಲೂಕಿನ ಪ್ರತಿ ಮನೆಯ ಕನಿಷ್ಠ ಓರ್ವ ಸದಸ್ಯನಾದರೂ ಸ್ವಸಹಾಯ ಸಂಘಗಳಿಗೆ ಸೇರಬೇಕು ಎಂದರು. ಸ್ವಸಹಾಯ ಸಂಘಗಳ ಒಕ್ಕೂಟದ ನೆಲ್ಯಾಡಿ ವಲಯಾಧ್ಯಕ್ಷ ವಸಂತ ಗೌಡ ಬಿಜೇರು ಮಾತನಾಡಿ, ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಉತ್ತಮ ಕೆಲಸ ನಡೆಯಲಿ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ನೋಣಯ್ಯ ಗೌಡ ಡೆಬ್ಬೇಲಿ ಅವರು ಮಾತನಾಡಿ, ಕೊಣಾಲು ಗ್ರಾಮದಲ್ಲಿ ಒಕ್ಕಲಿಗ ಸ್ವಸಹಾಯ ಸಂಘ ಆರಂಭಗೊಂಡು 10ವರ್ಷ ಆಗಿದೆ. 7 ವರ್ಷ ಒಕ್ಕೂಟದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಹೊಸ ಅಧ್ಯಕ್ಷ ಲಕ್ಷ್ಮಣ ಗೌಡ ಅವರಿಗೆ ಎಲ್ಲಾ ಸದಸ್ಯರೂ ಸಹಕಾರ ನೀಡಬೇಕು ಎಂದರು.

ದಾಖಲೆ ಹಸ್ತಾಂತರ:
ನಿರ್ಗಮನ ಅಧ್ಯಕ್ಷ ನೋಣಯ್ಯ ಗೌಡ ಡೆಬ್ಬೇಲಿ, ಕಾರ್ಯದರ್ಶಿ ಸಂತೋಷ್‌ಕುಮಾರ್ ಎಣ್ಣೆತ್ತೋಡಿ, ಜೊತೆ ಕಾರ್ಯದರ್ಶಿ ಶೇಖರ ಗೌಡ, ಉಪಾಧ್ಯಕ್ಷೆ ರೇವತಿಸುಂದರ ಗೌಡ, ಕೋಶಾಧಿಕಾರಿ ಮುಕುಂದ ಗೌಡ ಅವರು ನೂತನ ಅಧ್ಯಕ್ಷ ಲಕ್ಷ್ಮಣ ಗೌಡ ಗೌರ‍್ಲೆ, ಕಾರ್ಯದರ್ಶಿ ಲಲಿತ ತಿರ್ಲೆ, ಉಪಾಧ್ಯಕ್ಷ ರತ್ನಾಕರ, ಜೊತೆ ಕಾರ್ಯದರ್ಶಿ ಸ್ವಾತಿ ಹಾಗೂ ಕೋಶಾಧಿಕಾರಿ ಸದಾನಂದ ಡೆಬ್ಬೇಲಿ ಅವರಿಗೆ ದಾಖಲೆ ಪುಸ್ತಕ ಹಸ್ತಾಂತರಿಸುವ ಮೂಲಕ ನೂತನ ಒಕ್ಕೂಟದ ಪದಗ್ರಹಣ ನಡೆಯಿತು.

ಊರ ಗೌಡರಿಗೆ ಸನ್ಮಾನ:
ಊರ ಗೌಡರಾದ ಸಾಂತಪ್ಪ ಗೌಡ ಎಣ್ಣೆತ್ತೋಡಿ, ಮೇದಪ್ಪ ಗೌಡ ಸಂಕೇಶ, ಮುಕುಂದ ಗೌಡ ಗೌರ‍್ಲೆ, ಧರ್ಣಪ್ಪ ಗೌಡ ಕೋಲ್ಪೆ, ಮುತ್ತಪ್ಪ ಗೌಡ ಎಣ್ಣೆತ್ತೋಡಿ, ಲಿಂಗಪ್ಪ ಗೌಡ ದರ್ಖಾಸು, ಒತ್ತುಗೌಡರಾದ ನೋಣಯ್ಯ ಗೌಡ ಡೆಬ್ಬೇಲಿಯವರಿಗೆ ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಅಯೋಧ್ಯೆ ಕರಸೇವಕರಿಗೆ ಗೌರವಾರ್ಪಣೆ:
1990ರಲ್ಲಿ ಅಯೋಧ್ಯೆ ಕರಸೇವಕರಾಗಿ ಭಾಗವಹಿಸಿದ್ದ ಪೂವಪ್ಪ ಗೌಡ ಎಣ್ಣೆತ್ತೋಡಿ ಅವರಿಗೆ ಶಾಲು, ಹಾರಾರ್ಪಣೆ, ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಲಿಂಗಪ್ಪ ಗೌಡ ದರ್ಖಾಸು ಅವರು ಪೂವಪ್ಪ ಗೌಡ ಅವರ ಪರಿಚಯ ಮಾಡಿದರು.

ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ಕರಾಟೆಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಕ್ಷಿತ್, ಖೋಖೋದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಯೋಕ್ಷಿತ, ರಶ್ಮಿತ, ಮೇಘನಾ, ಕುಶ್ಮಿತಾರವರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಿದ್ದಿ, ಲಕ್ಷ್ಯ, ದೀಪ್ತಿ, ಹರ್ಷಿತಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಗ್ರಾ.ಪಂ.ಸದಸ್ಯರಿಗೆ ಗೌರವಾರ್ಪಣೆ:
ಗೋಳಿತ್ತೊಟ್ಟು ಗ್ರಾ.ಪಂ. ಅಧ್ಯಕ್ಷೆ ಸವಿತಾ, ಸದಸ್ಯರಾದ ಜನಾರ್ದನ ಪಟೇರಿ, ಶೋಭಾಲತಾ, ವಾರಿಜಾಕ್ಷಿ, ಬಾಲಕೃಷ್ಣ ಅಲೆಕ್ಕಿ, ಶಿವಪ್ರಸಾದ್, ಶೃತಿ ಕೋಲ್ಪೆ, ನೋಣಯ್ಯ ಗೌಡ, ಕುಟ್ರುಪ್ಪಾಡಿ ಗ್ರಾ.ಪಂ.ಸದಸ್ಯೆ ವಿಜಯಲಕ್ಷ್ಮೀ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಧನಸಹಾಯ ವಿತರಣೆ:
ಜಯಂತಿ ಬಾಲಕೃಷ್ಣ ಗೌಡ ಪಾತೃಮಾಡಿ ಅವರಿಗೆ ಧನಸಹಾಯ ವಿತರಣೆ ಮಾಡಲಾಯಿತು.

ಅತ್ಯುತ್ತಮ ತಂಡ ಗುರುತಿಸುವಿಕೆ:
ಕೊಣಾಲು ಒಕ್ಕೂಟದಲ್ಲಿ 12 ಸ್ವಸಹಾಯ ಸಂಘಗಳಿದ್ದು ಈ ಪೈಕಿ ’ಶ್ರೀ ಗೌರಿ’ ಸ್ವಸಹಾಯ ಸಂಘವನ್ನು ಅತ್ಯುತ್ತಮ ತಂಡವೆಂದು ಗುರುತಿಸಿ ತಂಡದ ಸದಸ್ಯೆಯರಿಗೆ ಶಾಲುಹಾಕಿ ಗೌರವಿಸಲಾಯಿತು.

ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ, ಊರ ಗೌಡರಾದ ಮೇದಪ್ಪ ಗೌಡ ಸಂಕೇಶ, ಗ್ರಾಮ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಗೌಡ ಕಾಯರ್ತಡ್ಕ, ಯುವ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಕೋಲ್ಪೆ, ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾಲತಾ ಕೋಲ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಲಲಿತಾ ಅವರು ಒಕ್ಕೂಟದ ವರದಿ ವಾಚಿಸಿದರು. ಶೋಭಾಲತಾ ಕೋಲ್ಪೆ ಅವರು ಚಿಂತನ ವಾಚಿಸಿದರು. ಕೊಣಾಲು ಒಕ್ಕೂಟದ ನೂತನ ಅಧ್ಯಕ್ಷ ಲಕ್ಷ್ಮಣ ಗೌಡ ಗೌರ‍್ಲೆ ಸ್ವಾಗತಿಸಿದರು. ಲಿಂಗಪ್ಪ ಗೌಡ ದರ್ಖಾಸು ವಂದಿಸಿದರು. ಮೇಲ್ವಿಚಾರಕಿ ಸುಮಲತಾ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಯಶೋಧ ಪ್ರಾರ್ಥಿಸಿದರು. ಪ್ರೇರಕ ಪರಮೇಶ್ವರ ಗೌಡ ಕೊಂಬಾರು ಸಹಕರಿಸಿದರು.

LEAVE A REPLY

Please enter your comment!
Please enter your name here