ಫೆ.17-18: ಬಾಳೆಹಿತ್ಲು ತರವಾಡು ಕುಟುಂಬದ ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮೋತ್ಸವ

0

ಪುತ್ತೂರು: ಬಾಳೆಹಿತ್ಲು ತರವಾಡು ಕುಟುಂಬದ ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮೋತ್ಸವವು ಫೆ.17- 18ರಂದು ಬಾಳೆಹಿತ್ಲು ತರವಾಡು ಮನೆಯಲ್ಲಿ ನಡೆಯಲಿದೆ. 

ಫೆ.17ರಂದು ಬೆ.9ಕ್ಕೆ- ಗಣಪತಿ ಹೋಮ, ಮುಡಿಪು ಪೂಜೆ, ಸಂಜೆ 6ಕ್ಕೆ- ಶ್ರೀದೈವಗಳ ಭಂಡಾರ ತೆಗೆಯುವುದು, ರಾತ್ರಿ 8ಕ್ಕೆ- ಗುಳಿಗ ದೈವಗಳ ನೇಮೋತ್ಸವ, ರಾತ್ರಿ- 9ಕ್ಕೆ ಅನ್ನ ಸಂತರ್ಪಣೆ, 9.30ಕ್ಕೆ-  ಪೊಸವಳಿಕೆತ್ತಾಯ ದೈವದ ನೇಮ ಮತ್ತು ಸಹಪರಿವಾರ ದೈವಗಳಾದ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ. 

ಫೆ.18ರಂದು ಬೆ.4ಕ್ಕೆ- ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ, ಮ.1ಕ್ಕೆ- ಅನ್ನ ಸಂತರ್ಪಣೆ ನಡೆಯಲಿದೆ ಎಂದು ತರವಾಡು ಮನೆಯ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here