ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ಫೆ.16ರಂದು ವೈಭವದ ರಥೋತ್ಸವ ನಡೆಯಿತು.ರಾತ್ರಿ ಶ್ರೀ ದೇವರ ಉತ್ಸವ ಬಲಿ ಬಳಿಕ ರಥರೋಹಣ ನಡೆಯಿತು. ಬಳಿಕ ಸುಡುಮದ್ದು ಸೇವೆ ಬಳಿಕ ರಥೋತ್ಸವ ನಡೆಯಿತು. ಕಟ್ಟೆಪೂಜೆ ಸೇವೆ (ಸಂಪಿಗೆ ಕಟ್ಟೆ), ಉತ್ಸವ, ದರ್ಶನ ಬಲಿ, 1ವಸಂತ ಕಟ್ಟೆಪೂಜೆ, ಅಷ್ಠಾವಧಾನ ಸೇವೆ, ಬಟ್ಟಲು ಕಾಣಿಕೆ, ಮಂಗಳಾರತಿ, ಮಂಗಳ ಪ್ರದಕ್ಷಿಣೆ ಕೊನೆಗೆ 1 ಮಹಾಮಂಗಳಾರತಿ ನಡೆಯಿತು.