ಪುತ್ತೂರು: ಸಮಸ್ತ ಉಲಮಾ ಸಂಘಟನೆಯ ಪೋಷಕ ಸಂಘಟನೆಯಾದ ಎಸ್ ವೈ ಎಸ್ ನ ಕೇಂದ್ರ ಸಮಿತಿಯ ನಿರ್ದೇಶನದಂತೆ ಮುಕ್ವೆ ಜುಮಾ ಮಸೀದಿ ವಠಾರದಲ್ಲಿ ಆ.15 ರಂದು ಸಂಜೆ “ಜಾತ್ಯತೀತತೆ ಭಾರತದ ಮತ” ಎಂಬ ಘೋಷಣೆಯೊಂದಿಗೆ ರಾಷ್ಟ್ರ ಸಂಗಮ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಮಸ್ತ ಮುಶಾವರ ಸದಸ್ಯರಾದ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್, ಬಿ ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್, ಸೈಯದ್ ಅಹ್ಮದ್ ಪೂಕೋಯ ತಂಙಳ್, ಉಸ್ಮಾನುಲ್ ಫೈಝಿ ತೋಡರ್, ಭಾಗವಹಿಸಲಿದ್ದು, ವಿವಿಧ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ನ ಧರ್ಮ ಗುರುಗಳಾದ ಜಾನ್ ಮೊರಾಸ್ ಪುತ್ತೂರು, ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸೇರಿದಂತೆ ಹಲವಾರು ಉಲೇಮಾ, ಉಮರಾ ನೇತಾರರು, ಸಮಸ್ತ ಪೋಷಕ ಸಂಘಟನೆಗಳ ನಾಯಕರು, ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಮುಲಾರ್ ಮತ್ತು ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.