ಪುತ್ತೂರು: ಪುತ್ತೂರಿನ ಟೀಮ್ ಒಳಿತು ಮಾಡು ಮನುಷ ತಂಡದ ಮುಂದಾಳತ್ವದಲ್ಲಿ ,ರೋಟರಿಕ್ಲಬ್ ಪುತ್ತೂರು ಎಲೈಟ್ , ಭವತಿ ಬಿಕ್ಷಾ ದೇಹಿ ಬಡವರ ಬಂಧು ಸೇವಾ ತಂಡ ಕುಕ್ಕಿಪಾಡಿ ಬಂಟ್ವಾಳ, ಓಂ ನ್ಯೂಸ್ ಬಳಗ ಪುತ್ತೂರು, ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಾಗೂ ಅನಾರೋಗ್ಯ ಪೀಡಿತರಿಗೆ 28ನೇ ಯೋಜನೆಯ ಆಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಪುತ್ತೂರಿನ ಸುದಾನ ಶಾಲಾ ವಠಾರದ ಎಡ್ವರ್ಡ್ ಕನ್ಫ್ ರೆನ್ಸ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ನ ಜಿಲ್ಲಾ ಅಧ್ಯಕ್ಷ H R ಕೇಶವ ಮಾತನಾಡಿ ಟೀಮ್ ಒಳಿತು ಮಾಡು ಮನುಷ ತಂಡ ಅವಶ್ಯಕತೆ ಇರುವ ಅನಾರೋಗ್ಯದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ಟನ್ನು ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.ಸೇವೆ ಮಾಡುವಾಗ ಎಲ್ಲರೂ ಒಳ್ಳೆಯ ಮನಸಿನಿಂದ ಮಾಡಬೇಕು ಇದರಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಸಮಾನ ರೀತಿಯಲ್ಲಿ ಹಂಚುವ ಪ್ರತಿಷ್ಠಿತ ಕಾರ್ಯಕ್ರಮ ಎಂದರು.
ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಅಬ್ದುಲ್ ರಜಾಕ್ ಕಬಕ ಕಾರ್ಸ್ ಟೀಮ್ ಒಳಿತು ಮಾಡು ಮಾನುಷ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ಕಾರ್ಯದರ್ಶಿ ಆಸ್ಕರ್ ಆನಂದ್ ,ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ,ZN ಸುಜೀತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಭವತಿ ಭಿಕ್ಷಮ್ ದೇಹಿ ಕುಕ್ಕಿಪಡಿ ಬಂಟ್ವಾಳ ಇದರ ಸ್ಥಾಪಕ ಅಧ್ಯಕ್ಷ ಗುರುರಾಜ್ ಕುಕ್ಕಿಪಡಿ, ಅಧ್ಯಕ್ಷೆ ಶೋಭಾ ಮಡಿವಾಳ , ಸ್ಥಾಪಕಾಧ್ಯಕ್ಷ ಚೇತನ್ ಕುಮಾರ್ , ಗೌರವಾಧ್ಯಕ್ಷ ಶರತ್ ಕುಮಾರ್ ,ಸಂಚಾಲಕ ಕೃಷ್ಣಪ್ಪ ಶಿವನಗರ,ಸದಸ್ಯರಾದ ಸರಸ್ವತಿ ಬನ್ನೂರು ,ಕಾವ್ಯ ಬನ್ನೂರು,ಮಮತಾ ,ಕಾವ್ಯ, ಸೌಜನ್ಯ, ರಶ್ಮಿತ,ಅಕ್ಷಯ್ ,ನಾಗೇಶ್ ಬೆಳ್ಳಾರೆ,ವಿಜಯ್ ಕುಮಾರ್,ಶ್ರೇಯಾ,ಪುಣ್ಯ,ಕೃಪಾ,ದೀಕ್ಷಾ,ಪ್ರದೀಪ್,ಶರಣ್,ಹೇಮಂತ್,ಜೀವನ್,ಪ್ರತೀಕ್,ಸಮಂತ್ ಹಾಗೂ ಯಶೋದಾ ಉಪಸ್ಥಿತರಿದ್ದರು.ರಕ್ಷಾ, ಅತ್ಮಿ ಪ್ರಾರ್ಥಿಸಿ, ಶೃತಿಕಾ ಜಾಲ್ಸೂರು ಸ್ವಾಗತಿಸಿ, ವಂದಿಸಿದರು..ಭವತಿ ಭಿಕ್ಷಂ ದೇಹಿ ತಂಡದ ಸ್ಥಾಪಕಾಧ್ಯಕ್ಷ ಗುರುರಾಜ್ ಕುಕ್ಕಿಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.