ಉಪ್ಪಿನಂಗಡಿ: ಕೋರಿಯರ್ ನಿವಾಸಿ ಆತ್ಮಹತ್ಯೆ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಮೊಗ್ರು ಗ್ರಾಮದ ಕೋರಿಯರ್ ನಿವಾಸಿ ಯೋರ್ವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಮೊಗ್ರು ಗ್ರಾಮದ ಕೋರಿಯರ್ ನಿವಾಸಿ ಹರೀಶ್ (40) ಮೃತಪಟ್ಟವರು. ಇವರು ಪದ್ಮುಂಜದ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದವರು ಕೆಲ ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಬಂದಾರುನಲ್ಲಿರುವ ಪತ್ನಿ ಮನೆಗೆ ಹೋಗಿ ಅಲ್ಲಿಂದ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಕೆಲಸಕ್ಕೆ ಹೋಗದೆ, ತನ್ನ ಮನೆಗೆ ಹೋಗಿ ಫೆ.16ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹರೀಶ್ ಅವರ ಪತ್ನಿ ಲೋಲಾಕ್ಷಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here