ಪುಣಚ ಅಜ್ಜಿನಡ್ಕ ಶ್ರೀ ಗುಳಿಗ, ಕೊರಗಜ್ಜ ಸಾನಿಧ್ಯದಲ್ಲಿ ಗುಳಿಗ, ಕೊರಗಜ್ಜ ದೈವದ ನೇಮೋತ್ಸವ

0

ಪುಣಚ: ಅಜ್ಜಿನಡ್ಕ ಸಂಕೇಶ-ಕೊಡಂಗೆ ಶ್ರೀ ಗುಳಿಗ, ಕೊರಗಜ್ಜ ಸಾನಿಧ್ಯದಲ್ಲಿ ಶ್ರೀ ಗುಳಿಗ, ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.17 ರಂದು ನಡೆಯಿತು.

ಚಿತ್ರ : ವಸಂತ ಪುಣಚ

ಫೆ.17ರಂದು ಬೆಳಿಗ್ಗೆ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಗಣಪತಿ ಹೋಮ ನಡೆದು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಸಾಯಂಕಾಲ ದೈವಗಳಿಗೆ ಎಣ್ಣೆ ಬೂಲ್ಯ ಕೊಡುವುದು, ಮಂತ್ರ ಗುಳಿಗ ದೈವದ ನೇಮೋತ್ಸವ ನಡೆದು ಅನ್ನ ಸಂತರ್ಪಣೆ ನಡೆಯಿತು.ಬಳಿಕ ಶ್ರೀ ಕೊರಗತನಿಯ ದೈವದ ನೇಮೋತ್ಸವ ನಡೆಯಿತು. ಸಮಿತಿ ಗೌರವಾಧ್ಯಕ್ಷ ಎಸ್.ಕೊರಗಪ್ಪ, ಸಂಕೇಶ ಅಜಿಲ ಕುಟುಂಬಸ್ಥರು, ಬಂಧುಗಳು, ಮಿತ್ರರು, ಗಣ್ಯರು, ಗ್ರಾಮಸ್ಥರು, ಊರ ಪರವೂರ ಭಕ್ತಾದಿಗಳು ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here