ಪುತ್ತೂರಿನಲ್ಲಿ ಹಾಸ್ಪಿಟಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ- ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು ಸರಕಾರಿ ಆಸ್ಪತ್ರೆ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ – ಡಾ. ದೀಪಕ್ ರೈ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆ ಇವತ್ತು ಉತ್ತಮ ಸೇವೆ ನೀಡುವ ಮೂಲಕ ಗುಣಮಟ್ಟದ ವೈದ್ಯರನ್ನು ಒಳಗೊಂಡಿದೆ. ಹಾಗಾಗಿ ಜಿಲ್ಲೆಯಲ್ಲಿರುವ ತಾಲೂಕು ಆಸ್ಪತ್ರೆಗಳಲ್ಲಿ ಪುತ್ತೂರು ಪ್ರಥಮ ಸ್ಥಾನದಲ್ಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಹೇಳಿದರು.


ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಫೆ.18 ರಂದು ಕಿಲ್ಲೆ ಮೈದಾನದಲ್ಲಿ ನಡೆದ ಹೆಚ್ ಪಿ ಎಲ್ ಸೌಹಾರ್ದ ಟ್ರೋಪಿ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಹೊರಗುತ್ತಿಗೆದಾರರನ್ನು ಖಾಯಂಗೊಳಿಸುವ ಹೋರಾಟಕ್ಕೆ ಅನೇಕ ಬಾರಿ ಸ್ಪಂಧಿಸಿದ್ದೇನೆ. ಇವತ್ತು ಅಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ಉತ್ತಮ ಬಾಂಧವ್ಯ ಕ್ರಿಕೆಟ್ ಮೂಲಕ ಕಾಣುತ್ತಿದೆ. ಅದೇ ರೀತಿ ಪುತ್ತೂರು ಸರಕಾರಿ ಆಸ್ಪತ್ರೆಯು ಉತ್ತಮ ಸೇವೆ ನೀಡುವ ಮೂಲಕ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದರು.


ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ಡಾ. ಸುರೇಶ್ ಪುತ್ತೂರಾಯ ಅವರು ಮಾತನಾಡಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ವಿಶ್ರಾಂತಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕ್ರೀಡಾಕೂಟದ ಮೂಲಕ ಸ್ವಲ್ಪ ಒತ್ತಡದಿಂದ ಹೊರಬರಲು ಸಾಧ್ಯ ಎಂದರು. ಪುತ್ತೂರು ಸರಕಾರಿ ಆಸ್ಪತ್ರೆಯ ಡಾ. ಜಯದೀಪ್ ಅವರು ಮಾತನಾಡಿ ಕ್ರೀಡೆ ಸಹೋದರತೆ, ಸ್ನೇಹಶೀಲತೆ, ಒಗ್ಗಟ್ಟು ಸದಾ ಮುನ್ನಡೆಸುತ್ತದೆ ಎಂದರು.


ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ ಅರ್ಚನಾ ಕಾವೇರಿ, ಡಾ.ಶ್ವೇತಾ, ಡಾ. ಜೈನಾಬಿ, ಡಾ.ಜಯದೀಪ್, ಸರಕಾರಿ ಆಸ್ಪತ್ರೆ ನರ್ಸಿಂಗ್ ಅಧೀಕ್ಷಕಿ ನಾಗವೇಣಿ, ಡಾ.ಕೀರ್ತನ್ ಕಜೆ, ಧನ್ವಂತರಿ ಕ್ಲೀನಿಕಲ್ ಲ್ಯಾಬೋರೇಟರಿಯ ಚೇತನ್ ಪ್ರಕಾಶ್ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವಿ, ಅಶೋಕ್, ಪುರಂದರ, ಸುಧಾಕರ, ಮೋಹಿನಿ, ಸವಿತಾ, ದೇವದಾಸ್, ಹರೀಶ್, ಲೋಲಾಕ್ಷ, ಸವಿತಾ, ದಿವ್ಯ, ಕಿರಣ್ ಕುಮಾರ್, ಉಕ್ರಪ್ಪ, ಶ್ವೇತಾ, ವಿಕ್ಯಾತ್ ಅತಿಥಿಗಳನ್ನು ಗೌರವಿಸಿದರು. ಕ್ರೀಡಾ ಕೂಟದ ಸಂಘಟಕ ಅಬ್ದುಲ್ ರಜಾಕ್ ಸ್ವಾಗತಿಸಿದರು. ಸರಕಾರಿ ಆಸ್ಪತ್ರೆಯ ಕು ಶ್ವೇತಾ ಪ್ರಾರ್ಥಿಸಿದರು. ಕ್ರೀಡಾಕೂಟದಲ್ಲಿ ಸವಾದ್ ಪಂಜಿಕಲ್ಲು, ಅನ್ವರ್ ಅಡ್ಕಾರ್ ಪಂದ್ಯಾಟದ ತೀರ್ಪುಗಾರರಾಗಿದ್ದರು. ಕೆವಿಜಿಯ ಶಶಿಕಾಂತ್ ಮತ್ತು ಇಫಾಜ್ ಬನ್ನೂರು ಉದ್ಘೋಷಕರಾಗಿದ್ದರು. ಫೆ.16 ರಂದು ನಿಧನರಾದ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಅವರ ತಂದೆ ಕೃಷ್ಣಯ್ಯ ಬಲ್ಲಾಳ್ ಅವರ ನಿಧನಕ್ಕೆ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಮೌನ ಪ್ರಾರ್ಥನೆ ಮಾಡಲಾಯಿತು.

LEAVE A REPLY

Please enter your comment!
Please enter your name here