ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ- ಪೋಷಕರೊಂದಿಗೆ ಸಂವಾದ, ಪಾದಪೂಜನ ಕಾರ್ಯಕ್ರಮ

0

ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ತಂದೆ-ತಾಯಿ – ಶ್ರೀ ರಘುರಾಜ್ ಉಬರಡ್ಕ

ಪುತ್ತೂರು:ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರೊಂದಿಗೆ ಸಂವಾದ ಹಾಗೂ ಪಾದಪೂಜನ ಕಾರ್ಯಕ್ರಮ ಫೆ.15 ರಂದು ಹನುಮಾನ್ ನಗರ ಕೇವಳ ಶಾಲೆಯ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ವಹಿಸಿ, ನಮ್ಮಲ್ಲಿ ಗುರುಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಆಗ ನಮ್ಮಲ್ಲಿ ಗುರುಶಕ್ತಿ ಉದ್ದೀಪನಗೊಂಡು ನಮ್ಮನ್ನು ರಕ್ಷಿಸುತ್ತದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ವಿಧ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕರು ಹಾಗೂ ಶಿಕ್ಷಣ ಸಂಯೋಜಕ ರಘುರಾಜ್ ಉಬರಡ್ಕ ವಹಿಸಿ ತಂದೆ ತಾಯಿ ಮಕ್ಕಳ ಸಂಬಂಧ ಹೇಗಿರಬೇಕು, ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಮನಮಿಡಿಯುವಂತೆ ಹಲವು ನಿದರ್ಶನಗಳ ಮೂಲಕ ತಿಳಿಸಿದರು.


ವಿದ್ಯಾರ್ಥಿಗಳು ಹೆತ್ತವರ ಪಾದಪೂಜೆ ಮಾಡಿದರು. ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಪ್ರೌಢ ವಿಭಾಗದ ಪರಿವೀಕ್ಷಕಿ, ಸರಸ್ವತೀ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯೆ ಪುಲಸ್ತ್ಯಾ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯ ಸೀತರಾಮ ಗೌಡ ಎ ,ಪ್ರೌಢವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ ಎಸ್ ರೈ ಉಪಸ್ಥಿತರಿದ್ದರು.


ಮೋನಿಷಾ ರೈ ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ಗೌಡ ಆರಿಗ ಸ್ವಾಗತಿಸಿ, ಶಿಕ್ಷಕಿ ಜಲಜಾಕ್ಷಿ ಬಿ ವಿ ವಂದಿಸಿದರು. ಸೌಮ್ಯ ಕೆ ಎ ಅಥಿತಿಗಳನ್ನು ಪರಿಚಯಿಸಿದರು, ಶಿಕ್ಷಕಿ ರಕ್ಷಿತಾ ರೈ ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here