ಮಣ್ಣು ಪರೀಕ್ಷಾ ಲ್ಯಾಬ್ ಆರ್ಗಾನಿಕೆಮ್, ಡಿಬಿಸಿ ನ್ವಾಲೆಡ್ಜ್ ಹಬ್ ಶುಭಾರಂಭ

0

ಪುತ್ತೂರು:ಸಾಧಾರಣಾ ಕೃಷಿಕನನ್ನು ಪ್ರಗತಿಪರ ಕೃಷಿಕನನ್ನಾಗಿ ಮಾಡಲು ಅನುಕೂಲವಾಗುವಂತಹ ಮಣ್ಣು ಪರೀಕ್ಷಾ ಪ್ರಯೋಗಾಲಯ, ರಸಗೊಬ್ಬರಗಳ ಮಾರಾಟ ಮಳಿಗೆ ‘ಆರ್ಗಾನಿಕೆಮ್’ ಹಾಗೂ ಡಿಸಿಬಿ ಕನ್ಟ್ರಕ್ಷನ್ ಮತ್ತು ಇಂಟೀರಿಯರ್ಸ್‌ನ ಇನ್ನೊಂದು ಭಾಗವಾದ ಡಿಬಿಸಿ ನ್ವಾಲೆಡ್ಜ್ ಹಬ್ ಫೆ.18ರಂದು ಪರ್ಲಡ್ಕ ಬೈಪಾಸ್ ಜಂಕ್ಷನ್ ಹತ್ತಿರ ಶುಭಾರಂಭಗೊಂಡಿತು.


ನೂತನ ಮಳಿಗೆಯನ್ನು ಈಶ್ವರ ಭಟ್ ಮರಕ್ಕೂರು, ಸುಬ್ಬಣ್ಣ ಭಟ್ ಕಲಾಕುಂಜ, ರಾಧಾಕೃಷ್ಣ ಪೆಜಕ್ಕಳ, ಗಿರೀಶ್ ಭಟ್ ಕಂದೇಲು, ಸುಬ್ರಹ್ಮಣ್ಯ ಭಟ್ ಮಂಜಕೋಡು ಹಾಗೂ ಗಾಯತ್ರಿ ಪೆಜಕ್ಕಳ ದೀಪ ಬೆಳಗಿಸಿ ಉದ್ಘಾಟಿಸಿದರು.


ಸಾರ್ವಜನಿಕರಿಗೆ ತರಬೇತಿ, ಸಭೆಗಳು, ಕಾರ್ಯಾಗಾರಗಳನ್ನು ನಡೆಸಲು ಅನುಕೂಲವಾದ ಡಿಸಿಬಿ ಕನ್ಟ್ರಕ್ಷನ್ ಮತ್ತು ಇಂಟೀರಿಯರ್ಸ್‌ನ ಇನ್ನೊಂದು ಭಾಗವಾದ ಡಿಬಿಸಿ ‘ನ್ವಾಲೆಡ್ಜ್ ಹಬ್’ ಹವಾನಿಯಂತ್ರಿತ ಸಭಾಂಗಣವನ್ನು ಗುಜರಾತ್ ದ್ವಾರಕಾದ ಮೋಹನ್ ಪುರಿ ಸ್ವಾಮಿ, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ಶ್ರೀಧರ ಭಟ್, ಮಂಜುನಾಥ ಬಾಯಾರಿ, ಉಜಿರೆ, ಗಿರೀಶ್ ಭಟ್ ಕಂದೇಲು ಹಾಗೂ ಹರಿಗಣೇಶ್ ಎತ್ತುಕಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು.


ಮಣ್ಣು ಪರೀಕ್ಷಾ ಪ್ರಯೋಗಾಯಲದ ಮೂಲಕ ಭೂಮಿಯ ಫಲವತ್ತತೆ ಪರೀಕ್ಷಿಸಿ ಅದಕ್ಕೆ ಆವಶ್ಯಕವಾದ ರಸಗೊಬ್ಬರಗಳ ಬಳಕೆ ಹಾಗೂ ಅಧಿಕ ಇಳುವರಿ ಪಡೆಯಲು ಪೂರಕವಾದ ಸಲಹೆ ನೀಡುವ ಹೊಸ ಆವಿಷ್ಕಾರ ಪ್ರಾರಂಭಿಸಲಾಗಿದೆ. ಇದರ ಮೂಲಕ ಕೃಷಿಯಲ್ಲಿ ರಾಸಾಯನಿಕ ಬಳಕೆ ಕಡಿಮೆ ಮಾಡಿ ಜೈವಿಕ ಗೊಬ್ಬರಗಳ ಬಳಕೆಯ ಬಗ್ಗೆ ರೈತರಿಗೆ ಪ್ರೋತ್ಸಾಹ ನೀಡಲಾಗುವುದು. ಇದರ ಜೊತೆಗೆ ಡಿಬಿಸಿ ನ್ವಾಲೇಡ್ಜ್ ಹಬ್ಬ ಹವಾನಿಯಂತ್ರಿತ ಸಭಾಂಗಣವನ್ನು ಪ್ರಾರಂಭಿಸಲಾಗಿದ್ದು ಇಲ್ಲಿಗೆ ರೈತರನ್ನು ಆಹ್ವಾನಿಸಿ ಅವರಿಗೆ ಪ್ರತಿ ತಿಂಗಳು ಎರಡು ಮೂರು ತರಬೇತಿ ಕಾರ್ಯಾಗಾರ ನಡೆಸಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿ ವೈಜ್ಞಾನಿಕ ವಿಧಾನಗಳ ಮೂಲಕ ಜೈವಿಕ ಗೊಬ್ಬರಗಳ ಬಳಕೆಯ ಬಗ್ಗೆ ಮಾಹಿತಿ, ರೋಗಗಳ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಯ ಪಾಲುದಾರ ನರೇಂದ್ರ ಪೆಜಕ್ಕಳ ತಿಳಿಸಿದರು. ಪಾಲುದಾರರಾದ ಪ್ರಸನ್ನ ಡಿ.ಭಟ್ ಹಾಗೂ ದಿನೇಶ್ ವಿ.ಭಟ್ ಸ್ವಾಗತಿಸಿ, ವಂದಿಸಿದರು.


ಸರಕಾರದಿಂದ ಪ್ರಮಾಣಿತಗೊಂಡಿರುವ ಮಣ್ಣು ಪರೀಕ್ಷಾ ಪ್ರಯೋಗಾಲಯದ ಮೂಲಕ ಮಣ್ಣು ಪರೀಕ್ಷಿಸಿ ಹೊಸ ತಂತ್ರಜ್ಞಾನದೊಂದಿಗೆ ಕೃಷಿಯಲ್ಲಿ ಕ್ರಾಂತಿಯನ್ನು ಮಾಡಲು ಸಹಕಾರಿಯಾಗಲಿದೆ. ಸಾವಯವ ರಸಗೊಬ್ಬರ, ನೀರಿನಲ್ಲಿ ಕರಗುವ ರಾಸಾಯನಿಕ ರಸಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು, ಕಿಣ್ವಗಳು, ಜೈವಿಕ ಬ್ಯಾಕ್ಟೀರಿಯಾಗಳ ಬಗ್ಗೆ ಮಾರಾಟ, ಅವುಗಳ ಬಳಕೆಯ ಬಗ್ಗೆ ಮಾಹಿತಿ ನೀಡಲಾಗುವುದು. ಡಿಬಿಸಿ ನ್ವಾಲೆಡ್ಜ್ ಹಬ್ ಎಸಿ ತರಬೇತಿ ಹಾಲ್ ನಲ್ಲಿ ಇತರ ತರಬೇತಿ, ಮೀಟಿಂಗ್ ಗಳಿಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here