ನೆಲ್ಯಾಡಿ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪೂರ್ವರಾಷ್ಟ್ರೀಯ ಅಧ್ಯಕ್ಷರ ಭೇಟಿ, ಕೊಡುಗೆಗಳ ಹಸ್ತಾಂತರ

0

ನೆಲ್ಯಾಡಿ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲಿಜನ್‌ಗೆ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಇದರ ಪೂರ್ವರಾಷ್ಟ್ರೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮ ಫೆ.13ರಂದು ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಘಟಕಗಳ ಸದಸ್ಯರ ಕುಟುಂಬ ಸಮ್ಮಿಲನ ಹಾಗೂ ವಿವಿಧ ಸಮಾಜಮುಖಿ ಕೊಡುಗೆಗಳ ಉದ್ಘಾಟನೆ, ಹಸ್ತಾಂತರವು ನಡೆಯಿತು.


ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಕಲ್ಲಿನ ಸ್ವಾಗತ ಫಲಕ ಉದ್ಘಾಟನೆ, ಬಲ್ಯದ ಕೆರೆನಡ್ಕ ಬಾಬು ಪೂಜಾರಿಯವರ ಪುತ್ರಿ, ವಿಕಲಚೇತನೆ ಲಾವಣ್ಯಗೆ ವೀಲ್ ಚಯರ್ ಕೊಡುಗೆ, ಬಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗ್ರಂಥಾಲಯಕ್ಕೆ 122 ಪುಸ್ತಕ, ಮಕ್ಕಳ ಬಟ್ಟಲು ಇಡುವ ಸ್ಟ್ಯಾಂಡ್ ಕೊಡುಗೆ, ಗೋಳಿತ್ತೊಟ್ಟು ಉನ್ನತೀಕರಿಸಿದ ಹಿ.ಪ್ರಾ.ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ ನೀಡಲಾಯಿತು. ನೆಲ್ಯಾಡಿಯ ಕೊಲ್ಯೊಟ್ಟು ಹೊಳೆ ಸಮೀಪ ನೆಲ್ಯಾಡಿ ಗ್ರಾ.ಪಂ.ಸಹಕಾರದೊಂದಿಗೆ ಸೀನಿಯರ್ ಚೇಂಬರ್ ವತಿಯಿಂದ ಸ್ವಚ್ಛತೆಯ ಅರಿವು ಮೂಡಿಸುವ ಸೂಚನಾ ಫಲಕ ಅಳವಡಿಸಲಾಯಿತು. ಹೊಸಮಜಲಿನಿಂದ ನೆಲ್ಯಾಡಿಯ ತನಕ ವಾಹನ ಜಾಥಾ ನಡೆಸಲಾಯಿತು.


ಬಳಿಕ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸೀನಿಯರ್ ಚೇಂಬರ್‌ನ ನೆಲ್ಯಾಡಿ ಲೀಜನ್ ಅಧ್ಯಕ್ಷ ನಾರಾಯಣ ಎನ್ ಬಲ್ಯ ಕೊಲ್ಲಿಮಾರು ಅಧ್ಯಕ್ಷತೆ ವಹಿಸಿದ್ದರು. ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಇದರ ಪೂರ್ವರಾಷ್ಟ್ರೀಯ ಅಧ್ಯಕ್ಷ ಡಾ.ಅರವಿಂದ ರಾವ್ ಕೆದಿಗೆ, ರಾಷ್ಟೀಯ ಉಪಾಧ್ಯಕ್ಷರಾದ ಜಿ.ಕೆ.ಹರಿಪ್ರಸಾದ್ ರೈ, ರಾಷ್ಟೀಯ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾದ ಚಿತ್ರಕುಮಾರ್, ರಾಷ್ಟೀಯ ಸಮುದಾಯ ಅಭಿವೃದ್ಧಿ ವಿಭಾಗದ ಸಯೋಜಕರಾದ ಡಾ.ಸದಾನಂದ ಕುಂದರ್, ಸೀನಿಯರ್ ಚೇಂಬರ್ ನೆಲ್ಯಾಡಿಯ ಸ್ಥಾಪಕ ಅಧ್ಯಕ್ಷರಾದ ಅಬ್ರಹಾಂ ವರ್ಗಿಸ್‌ರವರು ಶುಭಹಾರೈಸಿದರು.

ಯೋಜನಾ ನಿರ್ದೇಶಕ ರವಿಚಂದ್ರ ಗೌಡ ಹೊಸವಕ್ಲು, ನೆಲ್ಯಾಡಿ ಲೀಜನ್ ಕಾರ್ಯದರ್ಶಿ, ಉಪನ್ಯಾಸಕ ವಿಶ್ವನಾಥ ಶೆಟ್ಟಿ, ವೆಂಕಟ್ರಮಣ ಆರ್., ಸೀನಿಯರೇಟ್ ಅಧ್ಯಕ್ಷೆ ಪುಷ್ಪ ನಾರಾಯಣ ಬಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಡ ಮಹಿಳೆಯೋರ್ವರಿಗೆ ಟೈಲರಿಂಗ್ ಮಷೀನ್ ಕೊಡುಗೆಯಾಗಿ ನೀಡಲಾಯಿತು. ನೂತನವಾಗಿ ಆರಂಭಗೊಂಡ ಪುತ್ತೂರು ಲೀಜನ್‌ನ ಸದಸ್ಯರ ಪಟ್ಟಿಯನ್ನು ರಾಷ್ಟ್ರೀಯ ಅಧಿಕಾರಿಯವರಿಗೆ ನೀಡಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು, ಲೀಜನ್‌ನ 4ನೇ ಆವೃತ್ತಿಯ ಪತ್ರಿಕೆ ಅಭಿನಂದನಾವನ್ನು ಬಿಡುಗಡೆಗೊಳಿಸಲಾಯಿತು.


ಕಡಬ, ಸುಬ್ರಹ್ಮಣ್ಯ, ಕಾರ್ಕಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ ಸೀನಿಯರ್ ಚೇಂಬರ್ ಲೀಜನ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ರಾಷ್ಟೀಯ ಅಧಿಕಾರಿಗಳಾದ ಕಿಶೋರ್ ಫೆರ್ನಾಂಡಿಸ್, ಪ್ರಮೋದ್ ಬೆಳ್ತಂಗಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here