ಗೋಳಿತ್ತೊಟ್ಟು: ಹೊಲಿಗೆ ತರಬೇತಿ ಶಿಬಿರ ಸಮಾರೋಪ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಗೋಳಿತ್ತೊಟ್ಟು ವಲಯದ ಜ್ಞಾನವಿಕಾಸ ಕಾರ್ಯಕ್ರಮದಡಿ ಮೂರು ತಿಂಗಳು ಗೋಳಿತ್ತೊಟ್ಟು ಗೌಡ ಕಾಂಪ್ಲೆಕ್ಸ್‌ನಲ್ಲಿ ನಡೆದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.


ಗೌಡ ಕಾಂಪ್ಲೆಕ್ಸ್ ಮಾಲಕರಾದ ವೆಂಕಪ್ಪ ಗೌಡ ಡೆಬ್ಬೇಲಿ ಅವರು ಉದ್ಘಾಟಿಸಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ದಕ್ಷಿಣ ಕನ್ನಡ ಜಿಲ್ಲೆ 2 ಇದರ ನಿರ್ದೇಶಕರಾದ ಪ್ರವೀಣ್ ಕುಮಾರ್ ಅವರು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿ, ಎಲ್ಲಾ ಅಭ್ಯರ್ಥಿಗಳು ಹೊಲಿಗೆಯಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ಸ್ವಉದ್ಯೋಗವನ್ನು ಮಾಡುವಂತವರಾಗಬೇಕು. ಜೊತೆಗೆ ಇನ್ನೊಬ್ಬರಿಗೆ ಉದ್ಯೋಗ ನೀಡುವಂತವರಾಗಬೇಕು ಎಂದು ಹೇಳಿದರು.

ವಲಯಯಾಧ್ಯಕ್ಷ ಬಾಲಕೃಷ್ಣ ಗೌಡ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ, ಹೊಲಿಗೆ ತರಬೇತಿ ಶಿಕ್ಷಕಿ ಜಯಂತಿ ಬಿ.ಆರ್. ಶುಭಹಾರೈಸಿದರು. ಮಾಲತಿ ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಸ್ವಾಗತಿಸಿ, ವಂದಿಸಿದರು. ಹೊಲಿಗೆ ತರಬೇತಿ ಪಡೆದುಕೊಂಡ ಶಾಲಿನಿ, ಆಯಿಷಾ, ತಿರುಮಲೇಶ್ವರಿ, ಸೌಮ್ಯ, ಗೀತಾಪ್ರಿಯಾ ಅನಿಸಿಕೆ ವ್ಯಕ್ತಪಡಿಸಿದರು. ಅಭ್ಯರ್ಥಿಗಳು ತಾವು ಹೊಲಿಗೆ ಮಾಡಿ ತಯಾರಿಸಿದ ಸಿದ್ದ ಉಡುಪುಗಳನ್ನು ಪ್ರದರ್ಶನಕ್ಕೆ ಇಟ್ಟಿದರು.

LEAVE A REPLY

Please enter your comment!
Please enter your name here