ಹಾಸ್ಟೆಲ್ ಬರಹ ವಿವಾದ: ಅಧಿಕಾರಿಯನ್ನು ಹುದ್ದೆಯಿಂದ ಅಮಾನತುಗೊಳಿಸಿ, ತನಿಖೆಗೆ ಒಳಪಡಿಸಿ -ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಆರ್ ಸಿ ನಾರಾಯಣ್ ರೆಂಜ ಆಗ್ರಹ

0

ಪುತ್ತೂರು: ಕಾಂಗ್ರೆಸ್ ಸರ್ಕಾರ ಬಡ ಮಕ್ಕಳ ತಲೆಯಲ್ಲಿ ದ್ವೇಷದ ಕಿಚ್ಚನ್ನು ಹಚ್ಚಿಸಲು ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ತಿರುಚಿ ಸಮಾಜದಲ್ಲಿ ವಿಷ ಬಿತ್ತುವ ನಾಚಿಕೆಗೇಡಿನ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಸಮಾಜಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಾಡಿದ್ದಾರೆ.


ಅತಿ ಹೆಚ್ಚು ವಿದ್ಯಾರ್ಥಿಗಳು ಹಿಂದುಳಿದ ವರ್ಗ ಬಡ ಕುಟುಂಬದಿಂದ ಬಂದವರು ಇರುತ್ತಾರೆ. ಅವರ ಭಾವನೆಗಳನ್ನು ಸರಕಾರ ಪ್ರಶ್ನಿಸಲು ಹೊರಟಿದೆ. ಶಿಕ್ಷಣದಲ್ಲಿ ಸಂಸ್ಕೃತಿ-ಪರಂಪರೆ ಭಾರತೀಯತೆಯನ್ನು ತೆಗೆದು ನಕ್ಸಲ್‌ವಾದ, ಕಮ್ಯುನಿಸ್ಟ್ ಚಿಂತನೆಗಳನ್ನು ತುಂಬುವ ಮೂಲಕ ಭಾರತೀಯ ಶಿಕ್ಷಣ ಪರಂಪರೆಯನ್ನೇ ಅಡಿಮೇಲು ಮಾಡುವ ಕೆಲಸಕ್ಕೆ ಸಿದ್ದರಾಮಯ್ಯರವರ ಆಪ್ತ ಬಳಗ ಕೈ ಹಾಕಿದೆ.ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಿತ್ತುಹಾಕಿ, ಶಾಲೆಗಳಲ್ಲಿ ಹಬ್ಬಹರಿದಿನಗಳನ್ನು ಆಚರಿಸದಂತೆ ಆದೇಶಿಸಿದ್ದ ಕಾಂಗ್ರೆಸ್ ಸರ್ಕಾರ, “ಅಧಿಕಾರಿ”ಗಳ ಸಹಾಯದಿಂದ, ಕರ್ನಾಟಕದ ಭವಿಷ್ಯದ ತಲೆಮಾರುಗಳನ್ನು ಕತ್ತಲಿಗೆ ತಳ್ಳುತ್ತಿದೆ. ಪಾಠ ಮಾಡುವ ಶಿಕ್ಷಕರೇ, ‘ಕೈ ಮುಗಿದು ಒಳಗೆ ಬನ್ನಿ ಎನ್ನುವುದು ಮಕ್ಕಳಿಗೆ ಕಲಿಸುವ ಸಂಸ್ಕಾರ, ಈ ಅಧಿಕಾರಿಗೆ ಮಕ್ಕಳ ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಅಧಿಕಾರ ನೀಡಿದ್ದು ಯಾರು?ಈ ಕೂಡಲೇ ‘ಅಧಿಕಾರಿ’ಯನ್ನು ಹುದ್ದೆಯಿಂದ ಅಮಾನತುಗೊಳಿಸಿ, ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಆರ್ ಸಿ ನಾರಾಯಣ್ ರೆಂಜ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here