ಕವಯತ್ರಿ ಪೂರ್ಣಿಮಾ. ಟಿ ಪೆರ್ಲಂಪಾಡಿಯವರಿಗೆ ಸೇವಾ ರತ್ನ ಪ್ರಶಸ್ತಿ ಪ್ರಧಾನ

0

ಪುತ್ತೂರು: ಪೆರ್ಲಂಪಾಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕವಯತ್ರಿ ಪೂರ್ಣಿಮಾ. ಟಿ ಪೆರ್ಲಂಪಾಡಿ ಫೆ.18ರಂದು ರಾಯಚೂರಿನಲ್ಲಿ ನಡೆದ ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ಬೆಳಕು ಅಂತರ್ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗಾಗಿ ಸಾಧನ ಶ್ರೀ ಪ್ರಶಸ್ತಿ ಹಾಗೂ ಸಾಹಿತ್ಯ ಮತ್ತು ಶಿಕ್ಷಣ ಸಮಾಜ ಸೇವೆ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆಗಾಗಿ ರಾಷ್ಟ್ರಮಟ್ಟದ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿರುತ್ತಾರೆ.

ಇವರು ಬೆಳ್ಳಾರೆ ಜೀ ಸಿಸ್ ನ ಜೊತೆ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಇದರ ಹೋಬಳಿ ಘಟಕದ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿರುತ್ತಾರೆ. ಹಾಗೂ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.ಕೊಳ್ತಿಗೆ ಗ್ರಾಮದ ಮಿಥಿಲೇಶ್ ಆರ್ಟ್ಸ್ ಮತ್ತು ಗ್ರೀಷ್ಮಾ ಗ್ರೀನ್ ನರ್ಸರಿಯ ಮಾಲಕ ಪರಮೇಶ್ವರ ಗೌಡ ಪೆರ್ಲಂಪಾಡಿಯವರ ಪತ್ನಿ.

LEAVE A REPLY

Please enter your comment!
Please enter your name here