ಮೋದಿ ಗ್ಯಾರಂಟಿ – ಕಾಂಗ್ರೆಸ್ ಗ್ಯಾರಂಟಿ ಎಂದು ಹೋರಾಟಕ್ಕೆ ಇಳಿದಿವೆ. ಜನರ ಮುಂದೆ ಬಂದಿವೆ.
ಭ್ರಷ್ಟಾಚಾರ ಮುಕ್ತ ಗ್ಯಾರಂಟಿಯೇ ಜನರಿಗೆ ಮುಖ್ಯ ಎಂಬುದನ್ನು 2 ಪಕ್ಷಗಳು ಮರೆತಿವೆಯೇ?
2014ರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಗರಣಗಳ ಪಕ್ಷ, ಭ್ರಷ್ಟಾಚಾರದ ಗಂಗೋತ್ರಿ ಎಂದು ಮುಖ್ಯವಾಗಿ ಆಪಾಽಸುತ್ತಾ ಇತರ ಕೆಲವು ವಿಷಯಗಳನ್ನು ಮುಂದಿಟ್ಟು ಮೋದೀಜೀಯವರ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಜಯವನ್ನು ಗಳಿಸಿದೆ. 2023ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರಕಾರ 40% ಭ್ರಷ್ಟಾಚಾರದ ಸರಕಾರ ಎಂದು ಆರೋಪಿಸಿ 5 ಗ್ಯಾರಂಟಿಗಳನ್ನು ಮುಂದಿಟ್ಟು ಕಾಂಗ್ರೆಸ್ ಜಯ ಗಳಿಸಿದೆ. ಆದರೆ ಇಂದು ಕಾಂಗ್ರೆಸ್ ತನ್ನ 5 ಗ್ಯಾರಂಟಿಗಳನ್ನು ನಂಬಿ, ಕೇಂದ್ರ ಸರಕಾರ ಪ್ರಧಾನಿ ಮೋದಿಯವರ ಗ್ಯಾರಂಟಿಯನ್ನು ನಂಬಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಬಿಜೆಪಿ ಸರಕಾರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರಲು ಕಾರಣವಾಗಿದ್ದ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯನ್ನು ಮರೆತಿದ್ದಾರೆಯೇ ಎಂಬ ಪ್ರಶ್ನೆಯನ್ನು ಜನರು (ಮತದಾರರು) ಕೇಳಬೇಕಾಗಿದೆ.
ಏನೇ ಗ್ಯಾರಂಟಿ ಇದ್ದರೂ ಊರು, ರಾಜ್ಯ, ದೇಶ ಲಂಚ, ಭ್ರಷ್ಟಾಚಾರ ಮುಕ್ತವಾಗದಿದ್ದರೆ ಆ ಗ್ಯಾರಂಟಿಗಳ ಉದ್ದೇಶವೂ ವಿಫಲವಾಗುತ್ತದೆ ಎಂಬುದರ ಅರಿವು ಎಲ್ಲರಿಗೂ ಇದೆ. ಆದುದರಿಂದ ಜನತೆ ತಮ್ಮ ಮತ ಯಾವುದೇ ಪಕ್ಷಕ್ಕೆ, ವ್ಯಕ್ತಿಗಳಿಗೆ ಇರಲಿ ಆದರೆ ಅಭ್ಯರ್ಥಿಗಳಿಂದ, ಪಕ್ಷಗಳಿಂದ ತಮ್ಮ ಊರನ್ನು, ರಾಜ್ಯವನ್ನು ದೇಶವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗೊಳಿಸುವ ಘೋಷಣೆಯನ್ನು ಮಾಡಿಸಲಿ, ಪ್ರತಿಜ್ಞೆಯನ್ನು ಪಡೆಯಲಿ ಎಂಬ ಆಶಯವನ್ನು ಜನರ ಮುಂದೆ ಇಡಲು ಇಚ್ಚಿಸುತ್ತೇನೆ.