ಪುತ್ತೂರು : ಬೆಂಗಳೂರಿನ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಫೆ.17 ಮತ್ತು 18 ರಂದು ಅಡ್ವೆಂಚರ್ ಅಥ್ಲೆಟಿಕ್ ಅಕಾಡೆಮಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಥ್ಲೆಟಿಕ್ ಮೀಟ್ನಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪ.ಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ .
ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಆದರ್ಶ್ ಶೆಟ್ಟಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ 1.85 ಮೀಟರ್ಗಳ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದಾರೆ .ಇವರು ರತ್ನಾಕರ ಶೆಟ್ಟಿ ಮತ್ತು ಹೇಮಲತಾ. ಆರ್ ಶೆಟ್ಟಿ ದಂಪತಿಗಳ ಸುಪುತ್ರ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಯಶ್ವಿನ್ ಕೆ .ಆರ್ ಎತ್ತರ ಜಿಗಿತ ಸ್ಪರ್ಧೆಯಲ್ಲಿ 1.80 ಮೀಟರ್ಗಳ ದಾಖಲೆಯೊಂದಿಗೆ ಬೆಳ್ಳಿ ಪದಕವನ್ನು ಪಡೆದಿದ್ದಾರೆ.ಇವರು ರಾಘವ .ಕೆ ಮತ್ತು ವನಿತಾ .ಕೆ ದಂಪತಿಗಳ ಸುಪುತ್ರ. ಪುತ್ತೂರಿನ ಸಂತ ಫಿಲೋಮಿನಾ ಪಿ.ಯು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ ಮತ್ತು ರಾಜೇಶ್ ಮೂಲ್ಯ ಮತ್ತು ಪುಷ್ಪರಾಜ್ ಗೌಡ ಬರ್ತಿಕುಮೇರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಕಾಲೇಜಿನ ಸಂಚಾಲಕ ರೆ .ಫಾ ಲಾರೆನ್ಸ್ ಮಸ್ಕರೇನ್ಹಸ್, ಕ್ಯಾಂಪಸ್ ನಿರ್ದೇಶಕ ರೆ .ಫಾ ಸ್ಟ್ಯಾನಿ ಪಿಂಟೋ, ಪ್ರಾಂಶುಪಾಲ ರೆ .ಫಾ .ಅಶೋಕ್ ರಾಯನ್ ಕ್ರಾಸ್ತಾ ಮತ್ತು ಬೋಧಕ ಹಾಗೂ ಬೋಧಕೇತರ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.