ಮುತ್ತಿನ ನಗರಿ ಪುತ್ತೂರಿಗೆ ‘ಸುಲ್ತಾನ್’ ಎಂಟ್ರಿ

0

ಫೆ.22ರಂದು ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಶೋರೂಂ ಶುಭಾರಂಭ

ಪುತ್ತೂರು: ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ 1992 ರಿಂದಲೇ ವಿಶ್ವಾಸಾರ್ಹ ಅಭರಣ ಬ್ರಾಂಡ್ ಆಗಿದ್ದು ತನ್ನ 10ನೇ ಶಾಖೆ ಫೆ.22ರಂದು ಪುತ್ತೂರು ಏಳ್ಮುಡಿಯಲ್ಲಿ ಶುಭಾರಂಭಗೊಳ್ಳಲಿದೆ. ಬೆಳಗ್ಗೆ ಗಂಟೆ 11ಕ್ಕೆ ಜನಪ್ರಿಯ ಚಿತ್ರನಟಿ ಪ್ರಿಯಾಮಣಿ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ವೈವಿಧ್ಯಮಯದ ವಜ್ರದ ಸಂಗ್ರಹವನ್ನು ಅನಾವರಣ ಗೊಳಿಸಲಿದ್ದಾರೆ. ನಗರಸಭಾ ಸದಸ್ಯೆ ವಿದ್ಯಾ ಗೌರಿಯವರು ಜೆಮ್ ಸ್ಟೋನ್ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ “ಆಂಟಿಕ್” ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಅವರು ಚಿನ್ನಾಭರಣದ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಸುದಾನ ವಸತಿಯುತ ಶಾಲೆಯ ಸಂಚಾಲಕ ರೆವರೆಂಡ್ ವಿಜಯ್ ಹಾರ್ವಿನ್ ಅವರು ಮಕ್ಕಳ ಚಿನ್ನಾಭರಣದ ಮತ್ತು ಬೆಳ್ಳಿಯ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಲಯನ್ಸ್ 317ಡಿ ಇದರ ಅಧ್ಯಕ್ಷೆ ಡಾ.ರಂಜಿತಾ ಶೆಟ್ಟಿಯವರು CAIA – ಲೈಫ್ ಸ್ಟೈಲ್ ಜ್ಯುವೆಲ್ಲರಿಯನ್ನು ಅನಾವರಣಗೊಳಿಸಲಿದ್ದಾರೆ.

ಕಳೆದ ಮೂರು ದಶಕಗಳಿಂದ ಸುಲ್ತಾನ್ ಡೈಮಂಡ್ ಅಂಡ್ ಗೋಲ್ಡ್ ನಂಬಿಕೆ, ಶುದ್ಧತೆ, ಡಿಸೈನ್, ವೈವಿಧ್ಯತೆ, ಕನಿಷ್ಠ ತಯಾರಿಕಾ ವೆಚ್ಚ, ಮಾರಾಟ ನಂತರದ ಗ್ರಾಹಕ ಸ್ನೇಹಿ ಸೇವೆ, ಉಚಿತ ಜ್ಯುವೆಲ್ಲರಿ ನಿರ್ವಹಣಾ ವ್ಯವಸ್ಥೆ, ಮುಂತಾದವುಗಳಿಂದಾಗಿ ಜನಮನ್ನಣೆ ಪಡೆದಿದೆ. ಸುಲ್ತಾನ್‌ನಲ್ಲಿ ನಿವ್ವಳ ತೂಕಕ್ಕೆ ಚಿನ್ನದ ಬೆಲೆ ಮತ್ತು ಆಭರಣಗಳಲ್ಲಿರುವ ಕಲ್ಲುಗಳು ಅಥವಾ ಇನ್ನಿತರ ಪೂರಕ ಬೀಟ್ಸ್-ಮಣಿಗಳನ್ನು ಪ್ರತ್ಯೇಕವಾಗಿ ಬೆಲೆ ಸೂಚ್ಯಂಕದಿಂದ ಮಾರಾಟ ಮಾಡಲಾಗುತ್ತದೆ. ಸುಲ್ತಾನ್ ನಲ್ಲಿ IGI ಪ್ರಮಾಣೀಕೃತ ವಜ್ರದ ಆಭರಣಗಳನ್ನು ಮತ್ತು ಪ್ಲಾಟಿನಮ್ ಗಿಲ್ಡ್ ಇಂಟರ್ನ್ಯಾಷನಲ್ ಪ್ರಮಾಣಿಕೃತ ಪ್ಲಾಟಿನಮ್ ಆಭರಣಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಹಾಗೆಯೇ 100% ಶುದ್ಧ BIS ಹಾಲ್ ಮಾರ್ಕ್ HUID 916 ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

ಉದ್ಘಾಟನೆ ಪ್ರಯುಕ್ತ ವಿಶೇಷ ಕೊಡುಗೆ:
ಪುತ್ತೂರು ಮಳಿಗೆ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ವಿಶೇಷ ಆಕರ್ಷಕ ಕೊಡುಗೆಗಳನ್ನು ನೀಡಲಾಗಿದ್ದು ಈ ಕೊಡುಗೆಗಳು ಮಾ.10ರ ವರೆಗೆ ಮಾತ್ರ ಇರಲಿದೆ.
ಪ್ರತಿದಿನ ಇಬ್ಬರು ಗ್ರಾಹಕರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ 50% ಕಡಿತ. ಡೈಮಂಡ್ ಪ್ರತಿ ಕ್ಯಾರೆಟ್ ಮೇಲೆ ರೂ. 8000/- ರಿಯಾಯಿತಿ. ಬೆಳ್ಳಿ ಆಭರಣಗಳ ತಯಾರಿಕಾ ವೆಚ್ಚದ ಮೇಲೆ 25% ಕಡಿತ. ನಿಮ್ಮ ಹಳೆಯ ಚಿನ್ನದ ವಿನಿಮಿಯದಲ್ಲಿ ಪ್ರತೀ ಗ್ರಾಮಿಗೆ ರೂ 50/- ಹೆಚ್ಚುವರಿಯಾಗಿ ಪಡೆಯಬಹುದಾಗಿದೆ

ಪುತ್ತೂರು ಮಳಿಗೆ ಸುಮಾರು 10,000 ಚದರಡಿ ವಿಶಾಲವಾಗಿದ್ದು, ಇಲ್ಲಿ ಸುಲ್ತಾನ್‌ನ ಬ್ರಾಂಡ್ ಗಳಾದ ‘ಪ್ಯೂರ್ ವೇರ್ ಡೈಮಂಡ್ ಕಲೆಕ್ಷನ್’ ‘ಅಮೋಕ ಪ್ಲಾಟಿನಂ ಕಲೆಕ್ಷನ್ಸ್’ ‘ಆಕರ್ಷ’ ಅನ್ ಕಟ್ ಡೈಮಂಡ್’ ‘ಅಮೂಲ್ಯ’ ಜೆಮ್ ಸ್ಟೋನ್ ಕಲೆಕ್ಷನ್ಸ್’ ‘ತಾರಕ’ ಮಕ್ಕಳ ಆಭರಣಗಳು’ ಲೈಟ್ ವೈಟ್ ಆಭರಣಗಳು’ ಮತ್ತು ನಿತ್ಯೋಪಯೋಗಿ ಆಭರಣಗಳು ಇಲ್ಲಿ ಲಭ್ಯವಿದೆ.

ಸಮಕಾಲೀನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳು, ಸರಿಸಾಟಿಯಿಲ್ಲದ ಪರಿಶುದ್ಧತೆ ಮತ್ತು ಸೇವೆಗಳ ಉತ್ತಮ ಮಿಶ್ರಣದೊಂದಿಗೆ ಸುಲ್ತಾನ್ ಪುತ್ತೂರಿನ ಆಭರಣ ಪ್ರಿಯರ ಮನಸ್ಸನ್ನು ಅಸ್ವಾದಿಸಲು ಸಿದ್ಧವಾಗಿದೆ.

ನಾವು ಸುಲ್ತಾನ್ ಜ್ಯುವೆಲ್ಲರಿಯ ವಿಶೇಷತೆಗಳನ್ನು ಪುತ್ತೂರು ಜನತೆಗೆ ಪರಿಚಯಿಸಲಿದ್ದು, ನಮ್ಮ ಶೋರೂಮ್‌ಗೆ ಭೇಟಿ ನೀಡಿ ಸುಲ್ತಾನ್ ತನ್ನ ಗ್ರಾಹಕರಿಗೆ ನೀಡುವ ಅನನ್ಯ ಆಭರಣ ಸಂಗ್ರಹ ಮತ್ತು ಸೇವೆಯನ್ನು ಆನಂದಿಸಬೇಕು ಎಂದು ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ನಿರ್ದೇಶಕರಾದ ಡಾ.ಅಬ್ದುಲ್ ರಹೂಫ್ ಮತ್ತು ಅಬ್ದುಲ್ ರಹೀಮ್ ಅವರು ವಿನಂತಿಸಿದ್ದು ಪುತ್ತೂರಿನ ಈ ಮಳಿಗೆ ನೂರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಕರ್ನಾಟಕ ಮತ್ತು ಕೇರಳದಲ್ಲಿ ಒಟ್ಟು 10 ಶೋ ರೂಮ್‌ಗಳನ್ನು ಹೊಂದಿದ್ದು ಶೀಘ್ರದಲ್ಲಿ ಮೈಸೂರು ಮತ್ತು ಬೆಂಗಳೂರುನಲ್ಲಿ ಮತ್ತೆರಡು ಮಳಿಗೆಗಳನ್ನು ತೆರೆಯಲಿದೆ. ಸುಲ್ತಾನ್ ಚಿನ್ನ ಆಮದು ಮಾಡುವ ಲೈಸೆನ್ಸ್ ಹೊಂದಿದ್ದು, ಆಮದಿತ ಶುದ್ಧ ಚಿನ್ನದ ಬಾರ್‌ಗಳನ್ನು ತರಿಸುತ್ತದೆ. ಹಾಗೆಯೇ ತನ್ನದೇ ತಯಾರಿಕಾ ಘಟಕವನ್ನು ಹೊಂದಿದೆ. ಹೀಗಾಗಿ ಶುದ್ಧ ಚಿನ್ನದ ಅತ್ಯಂತ ಉತ್ಕೃಷ್ಟವಾಗಿ ತಯಾರಿಸಲಾದ ಆಭರಣಗಳನ್ನು ಕಡಿಮೆ ಬೆಲೆಯಲ್ಲಿ ನೀಡಲು ನಮಗೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸುಲ್ತಾನ್‌ನಲ್ಲಿ ಕನಿಷ್ಠ ತಯಾರಿಕಾ ವೆಚ್ಚ ಇದೆ ಮತ್ತು ವೇಸ್ಟೇಜ್ ವೆಚ್ಚ ಇರುವುದಿಲ್ಲ, ಹಾಗೆಯೇ 11 ತಿಂಗಳ ಮಾಸಿಕ ಕಂತುಗಳ ಯೋಜನೆ ಇದೆ. ಪಾವತಿಗಾಗಿ ಮೊಬೈಲ್ ಆಪ್ ಕೂಡ ಇರುತ್ತದೆ. ಮದುವೆ ಮತ್ತು ಇನ್ನಿತರ ಸಮಾರಂಭಗಳಿಗಾಗಿ ಮುಂಗಡ ಪಾವತಿ ಮಾಡಿ ಚಿನ್ನದ ಬೆಲೆ ಏರಿಕೆಯಂದ ರಕ್ಷಣೆ ಪಡೆಯಬಹುದಾಗಿದೆ. ಮದುವೆ ಖರೀದಿಗೆ ವಿಶೇಷ ರಿಯಾಯಿತಿ ಇರುತ್ತದೆ. ಸುಲ್ತಾನ್ ಹಬ್ಬ ಹರಿದಿನಗಳಿಗೆ, ಹಾಗೆಯೇ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ವಧು-ವರರಿಗೆ… ಹೀಗೆ ಎಲ್ಲಾ ವರ್ಗದ ಜನರಿಗೆ ಜನಪ್ರಿಯ ಆಕರ್ಷಕ ಆಭರಣಗಳ ಮಳಿಗೆಯಾಗಿದೆ.

LEAVE A REPLY

Please enter your comment!
Please enter your name here