ಪುತ್ತೂರು : ಅವಿಭಜಿತ ಪುತ್ತೂರು ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಅಕ್ಟೋಬರ್ ತನಕ ವೇತನ ಪಾವತಿಯಾಗಿದ್ದು ಕಳೆದ ಮೂರು ತಿಂಗಳಿನ ವೇತನ ಪಾವತಿಗೆ ಮಾತ್ರ ಬಾಕಿ ಇದೆ ಎಂದು ದ.ಕ.ಜಿಲ್ಲಾ ಅತಿಥಿ ಶಿಕ್ಷಕರ ಸಂಘಟನೆ ತಿಳಿಸಿದೆ.
ಪುತ್ತೂರು, ಕಡಬದಲ್ಲಿ ಕಳೆದ ಜೂನ್ ತಿಂಗಳಿನಿಂದ ಅತಿಥಿ ಶಿಕ್ಷಕರಿಗೆ ವೇತನ ನೀಡಿಲ್ಲ ಎಂದು ಕೆಲವರು ಶಾಸಕರಿಗೆ ದೂರು ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಶಾಸಕರಿಗೆ ತಪ್ಪು ಮಾಹಿತಿ ನೀಡಲಾಗಿದ್ದು ವಾಸ್ತವವಾಗಿ ಮೂರು ತಿಂಗಳ ವೇತನ ಮಾತ್ರ ಬರಲು ಬಾಕಿ ಇದೆ. ವೇತನ ಪಾವತಿ ವಿಚಾರದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.