ಕುಂಬ್ರದಲ್ಲಿ ಶ್ರೀದೇವಿ ಲೇಡೀಸ್ ಟೈಲರಿಂಗ್ ಶಾಫ್ ಶುಭಾರಂಭ

0

ಪುತ್ತೂರು: ಕುಂಬ್ರದ ಬ್ಯಾಂಕ್ ಆಫ್ ಬರೋಡ ಸಮೀಪದ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಶ್ರೀದೇವಿ ಲೇಡಿಸ್ ಟೈಲರಿಂಗ್ ಶಾಫ್ ಫೆ.21 ರಂದು ಗಣಪತಿ ಹೋಮದೊಂದಿಗೆ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಮೋಹನ್ ಗೌಡ ಬೊಳ್ಳಾಡಿ, ವಿಶ್ವನಾಥ ಗೌಡ ಬೊಳ್ಳಾಡಿ, ಕುಂಬ್ರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ಕಾರ್ಯನಿರ್ವಹಣಾಧಿಕಾರಿ ಭವಾನಿ ಗೌಡ, ಶೇಖರ ಗೌಡ, ಉಮೇಶ್ ಗೌಡ, ಶಿವರಾಮ ಗೌಡ, ರಮೇಶ್ ಗೌಡ ಸಾಂತಪ್ಪ ಗೌಡ, ತೀರ್ಥಪ್ರಸಾದ್ ಗೌಡ, ಎಸ್ ಮಾಧವ ರೈ ಕುಂಬ್ರ, ಮಮತಾ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕುಂಬ್ರ ಕಾರ್ಯಕ್ಷೇತ್ರದ ಮೇಲ್ವಿಚಾರಕಿ ಜಯಂತಿ, ಸೇವಾಪ್ರತಿನಿಧಿ ಅಕ್ಷತಾ ಜಾರತ್ತಾರು , ಸೇವಾಪ್ರತಿನಿಧಿ ಸವಿತಾ ಶೇಖಮಲೆ, ಸಂದ್ಯಾ ,ತುಳಸಿ, ವರ್ತಕರ ಸಂಘ ದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಟೈಲರಿಂಗ್ ಶಾಫ್ ಮಾಲಕಿ ಲಲಿತಾ ಶ್ರೀಧರ ಗೌಡರವರು ಅತಿಥಿಗಳನ್ನು ಸ್ವಾಗತಿಸಿ, ನಮ್ಮಲ್ಲಿ ವಿವಿಧ ಮಾದರಿಯ ಫ್ಯಾಶನ್ ಬ್ಲೌಸ್, ಸಾರಿಗೊಂಡೆ, ಸಾರಿ ಫಾಲ್ಸ್, ಎಂಬ್ರ್ಯಾಡರಿ ಬ್ಲೌಸ್ ಹಾಗೂ ಹೊಲಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿ ಗ್ರಾಹಕರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here