ಹೆಸರಾಂತ ಕಂಪನಿ ಸ್ಕೇಲ್ ಮಾಳಿಗೆ-ವ್ಯವಹಾರದಲ್ಲಿ 22 ವರುಷಗಳ ಅನುಭವ

0

17 ರ ಸಂಭ್ರಮದಲ್ಲಿ ಎಸ್.ಎಸ್.ಸ್ಕೇಲ್ ಬಝಾರ್

ಪುತ್ತೂರು: ಹೆಸರಾಂತ ಕಂಪೆನಿಯ ತೂಕದ ಯಂತ್ರಗಳ ಮಾರಾಟ ಹಾಗೂ ಸೇವೆ ಮೂಲಕ ಗ್ರಾಹಕ ವರ್ಗದ ಪ್ರೀತಿ, ವಿಶ್ವಾಸಗಳಿಸಿರುವ ಸುಮಾರು 22 ವರುಷಗಳಿಗೂ ಮಿಕ್ಕಿದ ಅನುಭವ ಹೊಂದಿರುವ ಸಂಸ್ಥೆ, ದರ್ಬೆ ಮೊಯಿದ್ದೀನ್ ಕಾಂಪ್ಲೆಕ್ಸ್‌ನಲ್ಲಿ ಕಳೆದ 16 ವರುಷಗಳಿಂದ ಕಾರ್ಯಾಚರಿಸುತ್ತಿರುವ, ಬಿ.ಎಂ.ಶಮೀರ್ ಮಾಲೀಕತ್ವದ ಎಸ್.ಎಸ್.ಸ್ಕೇಲ್ ಬಜ್ಹಾರ್ ಫೆ.19 ರಂದು 17ನೇಯ ವಾರ್ಷಿಕೋತ್ಸವವನ್ನು ಗ್ರಾಹಕ ವರ್ಗಕ್ಕೆ ಕೊಡುಗೆ ನೀಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿಕೊಂಡಿದೆ.


ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕಡಬದಲ್ಲೂ ಶಾಖೆ ಹೊಂದಿರುವ ಈ ಸಂಸ್ಥೆಯು ಸ್ಕೇಲ್ ವ್ಯವಹಾರದಲ್ಲಿ ಸರಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ. ಅತ್ಯುತ್ತಮ ಗುಣಮಟ್ಟ ಹಾಗೂ ದೀರ್ಘ ಬಾಳ್ವಿಕೆ ಬರುವಂತಹ ಹಲವು ಮಾದರಿಯ ತೂಕದ ಯಂತ್ರ, ವಾರಂಟಿಯೊದಿಗೆ ಹಾಗೂ ನಿಗದಿತ ಸಮಯ ಮಿತಿಯೊಳಗೆ ಅವುಗಳ ದುರಸ್ತಿ ಕಾರ್ಯವನ್ನು ಕೂಡ ಸಂಸ್ಥೆ ಗ್ರಾಹಕರಿಗೆ ಒದಗಿಸಿಕೊಡುವಲ್ಲೂ ಸೈ ಎನಿಸಿಕೊಂಡಿದೆ.

ಯೋಗ್ಯ ರೀತಿಯ ಬೆಲೆಯೊಂದಿಗೆ, ಸರಳ, ಸುಲಭ ರೀತಿಯ ಕಂತು ಮೂಲಕ ಪಾವತಿ ವಿಧಾನ ಮತ್ತು ಉಚಿತ ಸಾಗಾಟ ವ್ಯವಸ್ಥೆ ಜೊತೆಗೆ ತಾವಿದ್ದಲ್ಲಿಗೆ ಮೊಬೈಲ್ ಸರ್ವಿಸ್ ಸೇವೆಯನ್ನೂ ಸಂಸ್ಥೆ ನೀಡುತ್ತಿದೆ. ಪ್ರಮುಖ ಕಂಪೆನಿಗಳಾದ ಎಸ್ಸೇ, ಟಿವಿಎಸ್, ಬ್ಲೂ ಬೆಲ್, ಯಶಸ್ವಿನಿ, ಡಿ ಸೊನಿಕ್ ಹಾಗೂ ಒರಿಯನ್ ವೇಮ್ಯಾಕ್ಸ್, ಸತ್ಯಾಂ, ಓರಿಯನ್ ಇಲೆಕ್ಟ್ರಾನಿಕ್ ತೂಕದ ಯಂತ್ರಗಳ ಜತೆಗೆ ಮೆಕ್ಸಿಗೋ ಮತ್ತು ಮ್ಯಾಕ್ಸೆಲ್ ಕರೆನ್ಸಿ ಕೌಂಟಿಂಗ್ ಯಂತ್ರಗಳು, ಎಂ.ಜಿ.ತೂಕದ ಯಂತ್ರಗಳೂ ಮಳಿಗೆಯಲ್ಲಿ ಸಿಗಲಿದ್ದು, ವಾರ್ಷಿಕೋತ್ಸವದ ಸಲುವಾಗಿ ಕೃಷಿ ವರ್ಗದ ಗ್ರಾಹಕರಿಗೆ ಶೇಕಡಾ 20 ರಿಯಾಯಿತಿ ಘೋಷಣೆ ಮಾಡಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಮಾಲೀಕರು ವಿನಂತಿಸಿದ್ದಾರೆ.

ಕೃಷಿ ವರ್ಗಕ್ಕೆ 20% ರಿಯಾಯಿತಿ ಜೊತೆ ವಾರಂಟಿ…!
ಮಾತೃಸಂಸ್ಥೆ ಹಾಗೂ ಎರಡೂ ಸಹಸಂಸ್ಥೆಗಳಲ್ಲೂ ಕೃಷಿ ವರ್ಗದ ಗ್ರಾಹಕರಿಗೆ, ಎಲ್ಲಾ ರೀತಿಯ ಯಂತ್ರಗಳ ಮೇಲೂ ಸುಮಾರು 20% ರಿಯಾಯಿತಿಯಿದ್ದು, ೨ ವರುಷಗಳ ವಾರಂಟಿಯೂ ಸಿಗಲಿದೆ. ಮಾಹಿತಿಗಾಗಿ 9900414057 ಕರೆಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here