





ಉಪ್ಪಿನಂಗಡಿ: ನೇತ್ರಾವತಿ – ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಪುನರ್ ನಿರ್ಮಿತ ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಮಠದ ಬೃಂದಾವನ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರವನ್ನು ಗುರುವಾರದಂದು ಶ್ರೀ ಮಠದದಲ್ಲಿ ಬಿಡುಗಡೆಗೊಳಿಸಲಾಯಿತು.



ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಉದ್ಯಮಿ ವಿಷ್ಣುಮೂರ್ತಿ ಕುದ್ದಣ್ಣಾಯ, ಶ್ರೀ ಗುರುರಾಯರನ್ನು ನಂಬಿ ಮುನ್ನಡೆದವನಿಗೆ ಶ್ರೀ ರಾಯರ ಕೃಪೆ ಸದಾ ಲಭಿಸುತ್ತದೆ ಎನ್ನುವುದಕ್ಕೆ ಈ ಮಠದ ಪುನರ್ ನಿರ್ಮಾಣ ಕಾರ್ಯ ಸಾಗಿ ಬಂದಿರುವುದೇ ಸಾಕ್ಷಿ ಎಂದರು. ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಹರೀಶ್ ಉಪಾಧ್ಯಾಯರು ಮಾತನಾಡಿ, ಶೂನ್ಯ ಆರ್ಥಿಕ ಬಲದಿಂದ ಪ್ರಾರಂಭಿಸಿದ ಶ್ರೀ ಗುರುರಾಯರ ಮಠದ ನಿರ್ಮಾಣ ಕಾರ್ಯದಲ್ಲಿ ಭಗವದ್ಭಕ್ತರ ಸಹಕಾರದಿಂದ ಕಲ್ಪನಾತೀತ ಕಾರ್ಯಗಳು ನಡೆಯುವಂತಾಗಿದೆ. ಶ್ರೀ ರಾಯರ ಮಠ, ಸಭಾ ಭವನ, ಗೋಪುರ ಮಂಟಪಗಳ ಕಾರ್ಯ ಅತ್ಯುತ್ತಮ ಗುಣಮಟ್ಟದಲ್ಲಿ ನಡೆದು ರಾ.ಹೆ. 75ರ ಬಳಿಯಲ್ಲಿ, ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟದಲ್ಲಿ ರಾಯರ ಸೇವೆಗೈಯುವ ಭಾಗ್ಯ ಭಕ್ತರಿಗೆ ಒದಗಿ ಬರಲಿದೆ ಎಂದರು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರು ಗುತ್ತು ಮಾತನಾಡಿ, ಸದ್ಭಕ್ತರ ಭಾಗೀಧಾರಿಕೆಯಿಂದ ಅಸಾಧ್ಯ ಎಂದೆಣಿಸಿದ ಕಾರ್ಯವೂ ಸುಲಲಿತವಾಗಿ ನಡೆಯುವುದು ಎನ್ನುವುದಕ್ಕೆ ಇಲ್ಲಿನ ಮಠದ ನಿರ್ಮಾಣ ಕಾರ್ಯವೇ ಸಾಕ್ಷಿಯಾಗಿದೆ ಎಂದರು.





ವೇದಿಕೆಯಲ್ಲಿ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಉದಯ ಕುಮಾರ್, ೩೪ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ ಆರ್. ರೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ, ಕೆ. ಸದಾನಂದ, ಶ್ರೀನಿಧಿ ಉಪಾಧ್ಯಾಯ, ಶಾಂತಾರಾಮ ಕಾಂಚನ, ಹರೀಶ್ ನಾಯಕ್ ನಟ್ಟಿಬೈಲು, ಸ್ವರ್ಣೇಶ್ ಗಾಣಿಗ, ಶ್ರೀಮತಿ ದಮಯಂತಿ ಆರ್. ಶೆಟ್ಟಿ, ಎನ್. ಯಶವಂತ ಪೈ, ವಾಮನ ಉಬಾರ್, ಕೆ. ಜಗದೀಶ್ ಶೆಟ್ಟಿ, ಉಷಾ ಮುಳಿಯ, ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ, ಕೃಷ್ಣ ಪ್ರಸಾದ್ ದೇವಾಡಿಗ, ಡಾ. ಗೋವಿಂದ ಪ್ರಸಾದ್ ಕಜೆ, ಪ್ರೇಮಲತಾ ಕಾಂಚನ, ಶೈಲಜಾ, ಅಶೋಕ್ ಕುಮಾರ್ ರೈ ಎ., ಐ. ಪುರುಷೋತ್ತಮ ನಾಯಕ್, ಸುಂದರ ಆದರ್ಶನಗರ, ಬಿಪಿನ್, ಶಶಿಧರ್ ಗೌಡ, ಜೀವನ್, ರವೀಂದ್ರ ದರ್ಬೆ, ಜಯಪ್ರಕಾಶ್, ಸ್ವಪ್ನಾ ಜೀವನ್, ಗಿರೀಶ್ ಕುಂದರ್, ರಾಜೇಶ್ ನಾಯಕ್, ವಿನೀತ್ ಶಗ್ರಿತ್ತಾಯ, ವಿನಯ್ ಕುಮಾರ್, ಗಣೇಶ್ ಆಚಾರ್ಯ, ಸುದರ್ಶನ್ ಗಾಣಿಗ ಮತ್ತಿತರರು ಭಾಗವಹಿಸಿದ್ದರು.









