





ಆರೋಗ್ಯವೇ ಎಲ್ಲಕ್ಕಿಂತ ದೊಡ್ಡ ಸಂಪತ್ತು: ಮಠಂದೂರು


ಪುತ್ತೂರು: ವ್ಯಕ್ತಿಯೊಬ್ಬ ತನ್ನ ಆರೋಗ್ಯವನ್ನು ಒಳ್ಳೆಯ ರೀತಿಯಲ್ಲಿ ಕಾಪಾಡಿಕೊಳ್ಳುವುದೇ ಎಲ್ಲಕ್ಕಿಂತ ದೊಡ್ಡ ಸಂಪತ್ತು ಆಗಿದೆ. ಇದಕ್ಕಾಗಿಯೇ ಪ್ರಧಾನ ಮಂತ್ರಿ ಮೋದಿಯವರು ಜನರಿಗೆ ಕಡಿಮೆ ಹಾಗೂ ಉಚಿತವಾಗಿ ಔಷಧಿ ಹಾಗೂ ಚಿಕಿತ್ಸೆಯನ್ನು ನೀಡುವ ಸಲುವಾಗಿ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಲ್ಲದೆ ಬಡವ, ಶ್ರೀಮಂತ ಎನ್ನುವ ಬೇಧವಿಲ್ಲದೆ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ವಿತರಣೆ ಮಾಡುವ ಸಲುವಾಗಿ ಜನೌಷಧಿ ಕೇಂದ್ರಗಳನ್ನು ಆರಂಭಿಸಿದ್ದಾರೆ. ಆರೋಗ್ಯದ ವಿಷಯದಲ್ಲಿ ಯಾರೂ ಕೂಡ ತೊಂದರೆ ಪಡಬಾರದು, ಔಷಧಿ ಸಿಗದೆ ಯಾರೂ ಕೂಡ ಪ್ರಾಣ ಕಳೆದುಕೊಳ್ಳಬಾರದು ಎಂಬುದೇ ಪ್ರಧಾನಿಯವರ ಕಾಳಜಿಯಾಗಿದ್ದು ಇದನ್ನು ನಾವು ಕೊರೋನ ಸಂದರ್ಭದಲ್ಲಿ ದೇಶದ ಜನತೆಗೆ ಅವರು ಉಚಿತವಾಗಿ ನೀಡಿದ ಔಷಧಿಯಿಂದಲೇ ಅರ್ಥ ಮಾಡಿಕೊಳ್ಳಬಹುದಾಗಿದೆ, ಇದಕ್ಕಾಗಿಯೇ ದೇಶದಾದ್ಯಂತ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.





ಅವರು ಕುಂಬ್ರ ಜಂಕ್ಷನ್‌ನಲ್ಲಿರುವ ಸುವರ್ಣ ಕಾಂಪ್ಲೆಕ್ಸ್‌ನಲ್ಲಿ ಫೆ.23 ರಂದು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಪೂರೈಕೆ ಮಾಡುವ ಸಲುವಾಗಿ ಶೀಲಾ ಜಿ.ಭಟ್‌ರವರು ಕುಂಬ್ರದಲ್ಲೂ ಭಾರತೀಯ ಜನೌಷಧಿ ಕೇಂದ್ರವನ್ನು ಆರಂಭಿಸಿದ್ದಾರೆ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುವ ಮೂಲಕ ಈ ಕೇಂದ್ರವು ಜನರಿಗೆ ಉತ್ತಮ ಸೇವೆಯನ್ನು ನೀಡಲಿ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿ ನರಿಮೊಗರು ಪ್ರಸಾದೀನಿ ಆಯುರ್‌ನಿಕೇತನದ ಆಯುರ್ವೇದ ತಜ್ಞ ಡಾ| ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ, ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುತ್ತವೆ ಎಂದ ತಕ್ಷಣ ಜನರಿಗೆ ಆ ಔಷಧಿ ಒಳ್ಳೆದಿಲ್ಲ ಎಂಬ ಭಾವನೆ ಬರುತ್ತದೆ ಇದು ಸರಿಯಲ್ಲ ಭಾರತೀಯ ಜನೌಷಧಿ ಕೇಂದ್ರದ ಮೂಲಕ ದೊರೆಯುವ ಎಲ್ಲಾ ಔಷಧಿಗಳು ಕೂಡ ಅಂತರರಾಷ್ಟ್ರೀಯ ಪ್ರಯೋಗ ಕೇಂದ್ರದಲ್ಲಿ ಸರ್ಟೀಫೈಡ್ ಆದ ಔಷಧಿಗಳೇ ಆಗಿವೆ. ಜನೌಷಧಿ ಎಂದರೆ ಜನರ ಔಷಧಿ, ಜನರಿಗೆ ಕಡಿಮೆ ವೆಚ್ಚದಲ್ಲಿ ಔಷಧಿಗಳು ದೊರೆಯಬೇಕು ಯಾರೂ ಕೂಡ ಅನಾರೋಗ್ಯದಿಂದ ಇರಬಾರದು ಎಂಬ ಉದ್ದೇಶದಲ್ಲಿ ಪ್ರಧಾನಿ ಮೋದಿಯವರು ಈ ಜನೌಷಧಿ ಕೇಂದ್ರವನ್ನು ಆರಂಭಿಸಿದ್ದಾರೆ. ಕುಂಬ್ರದಲ್ಲಿ ಆರಂಭವಾದ ಈ ಜನೌಷಧಿ ಕೇಂದ್ರ ಜನರಿಗೆ ಒಳ್ಳೆಯ ಸೇವೆಯನ್ನು ನೀಡಲಿ ಎಂದು ಹೇಳಿ ಶುಭ ಹಾರೈಸಿದರು.

ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ, ಆರೋಗ್ಯವೊಂದಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು ಈ ನಿಟ್ಟಿನಲ್ಲಿ ಕುಂಬ್ರದಲ್ಲಿ ಆರಂಭವಾದ ಜನೌಷಧಿ ಕೇಂದ್ರವು ಒಳ್ಳೆಯ ರೀತಿಯಲ್ಲಿ ಜನರಿಗೆ ಔಷಧಿಗಳನ್ನು ಪೂರೈಕೆ ಮಾಡುವ ಮೂಲಕ ಯಶಸ್ವಿ ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.
ಕಟ್ಟಡ ಮಾಲಕರಾದ ಕೆ.ಎನ್.ಸುವರ್ಣಲತಾ ಉಪಸ್ಥಿತರಿದ್ದರು. ಜನೌಷಧಿ ಕೇಂದ್ರದ ಮಾಲಕಿ ಶೀಲಾ ಜಿ.ಭಟ್‌ರವರು ಅತಿಥಿಗಳಿಗೆ ಹೂ, ಶಾಲು ಹಾಕಿ ಸ್ವಾಗತಿಸಿದರು. ಸ್ವಸ್ತಿಕ್ ಪದ್ಯಾಣ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಕಾರ್ತೀಕೇಯ ಪದ್ಯಾಣ, ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಛಾ ಅಧ್ಯಕ್ಷ ಹರೀಶ್ ಬಿಜತ್ರೆ, ಕುಂಬ್ರ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ, ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಮದ್ದಳೆ ವಾದಕ ಪದ್ಯಾಣ ಜಯರಾಮ ಭಟ್, ಕಮರ್ಷಿಯಲ್ ಅಕೌಂಟೆಂಟ್ ಡಿ.ಆರ್.ಭಟ್, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ, ಹೊಟೇಲ್ ಉದ್ಯಮಿ ರಫೀಕ್ ಅಲ್‌ರಾಯ, ಬಶೀರ್ ಕೌಡಿಚ್ಚಾರ್, ಕರುಣಾಕರ ಶಾಂತಿವನ, ಅನಿತಾ ಶಾಂತಿವನ, ನಿವೃತ್ತ ಶಿಕ್ಷಕ ಸುಧಾಕರ ರೈ ಕುಂಬ್ರ, ಸುರೇಶ್ ಕುಮಾರ್ ಸುಶಾ, ತಿರುಮಲೇಶ್ವರಿ ಸ್ವಸ್ತಿಕ್ ಪದ್ಯಾಣ ,ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಉಳಿತೊಟ್ಟುa,ಪುತ್ತೂರು ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ಜಿಲ್ಲಾ STಮೋರ್ಚದ ಅಧ್ಯಕ್ಷರಾದ ಹರೀಶ್ ಬಿಜತ್ರೆ ಪುತ್ತೂರು ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನಒಳಮೊಗ್ರು ಪಂಚಾಯತ್ ಅಧ್ಯಕ್ಷರಾದ ತ್ರಿವೇಣಿ ಪಲ್ಲತಾರು ಬಿಜೆಪಿ ಪ್ರಮುಖರಾದ ದಯಾನಂದ ಉಜ್ರೆಮಾರ್ ,ರಾಜೇಶ್ ರೈ ಪರ್ಪುoಜ,ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್‌ಚಂದ್ರ ರೈ, ಸಿಇಒ ಭವಾನಿ ಬಿ.ಆರ್ ಮತ್ತು ಸಿಬ್ಬಂದಿಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ದ.ಕ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ
ದೇಶದ ಬಡವ, ಶ್ರೀಮಂತ ಎನ್ನುವ ಬೇಧವಿಲ್ಲದೆ ಎಲ್ಲರಿಗೂ ಪ್ರಯೋಜನ ಆಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಜಾರಿಗೆ ತಂದಿರುವ ಭಾರತೀಯ ಜನೌಷಧಿ ಕೇಂದ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿದೆ. ಭಾರತೀಯ ಜನೌಷಧಿ ಕೇಂದ್ರ ಸ್ಥಾಪನೆಯಲ್ಲಿ ದ.ಕ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.









