ಮಂಗಳೂರು, ಪುತ್ತೂರು, ಸುಬ್ರಹ್ಮಣ್ಯ ರೈಲು ಪ್ರಯಾಣ ದರದಲ್ಲಿ ಇಳಿಕೆ-ಇಂದಿನಿಂದ ಕೋವಿಡ್‌ ಪೂರ್ವ ಪ್ರಯಾಣ ದರ ಮತ್ತೆ ಜಾರಿ

0

ಪುತ್ತೂರು: ಕಬಕ ಪುತ್ತೂರು – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು, ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ರೈಲು ಪ್ರಯಾಣದ ದರ ಇಳಿಕೆಯಾಗಲಿದ್ದು, ಈ ಹಿಂದಿನ ಕೋವಿಡ್‌ ಪೂರ್ವದರ ಮುಂದುವರಿಯಲಿದೆ.

ಕೋವಿಡ್-19ರ ಅವಧಿಯಲ್ಲಿ ಕಬಕ ಪುತ್ತೂರು – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲನ್ನು ವಿಶೇಷ ಎಂದು ಪರಿಗಣಿಸಿ ಓಡಾಟ ನಡೆಸಲಾಗುತ್ತಿತ್ತು. ಅದೇ ರೀತಿ ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ರೈಲು ಎಕ್ಸ್ಪ್ರೆಸ್ ಕೋಟಾದಲ್ಲಿ ಓಡಾಟ ನಡೆಸುತ್ತಿತ್ತು. ಇಂದಿನಿಂದ ಈ ರೈಲುಗಳು ಈ ಹಿಂದಿನ ಕೋವಿಡ್‌ ಪೂರ್ವ ದರದಲ್ಲಿ ಮತ್ತೆ ಓಡಾಟ ನಡೆಸಲಿದೆ. ಅದರಂತೆ ಕಬಕ ಪುತ್ತೂರು – ಮಂಗಳೂರು ಸೆಂಟ್ರಲ್ ದರ ₹15 (ಮೊದಲು ₹30), ಕಬಕ ಪುತ್ತೂರು – ಮಂಗಳೂರು ಜಂಕ್ಷನ್/ಬಂಟ್ವಾಳ ದರ ₹10, ಕಬಕ ಪುತ್ತೂರು – ಸುಬ್ರಹ್ಮಣ್ಯ ರೋಡ್ ₹10 ಮತ್ತು ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ದರ ₹25 ಆಗಿರಲಿದೆ.

LEAVE A REPLY

Please enter your comment!
Please enter your name here