ನ.9 : ಮುಕ್ಕೂರಿನಲ್ಲಿ ನೇಸರ ದಶ ಪ್ರಣತಿ ಪ್ರಯುಕ್ತ ಹಗ್ಗಜಗ್ಗಾಟ, ವಾಲಿಬಾಲ್ ಪಂದ್ಯಾಕೂಟ, ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು : ದಶ ವರ್ಷದ ಹೊಸ್ತಿಲಿನಲ್ಲಿರುವ ಸವಣೂರು ಸಮೀಪದ ಮುಕ್ಕೂರು ನೇಸರ ಯುವಕ ಮಂಡಲವೂ ನ.9 ರಂದು ಮುಕ್ಕೂರು ವಠಾರದಲ್ಲಿ ಹಮ್ಮಿಕೊಂಡಿರುವ ಪುರುಷರ ವಿಭಾಗದ ಲೆವೆಲ್, ಸಿಂಗಲ್ ಗ್ರಿಪ್ ಹಗ್ಗಜಗ್ಗಾಟ ಹಾಗೂ ಗ್ರಾಮ ಗ್ರಾಮಗಳ ವಾಲಿ ಬಾಲ್ ಪಂದ್ಯಾಟದ ಆಮಂತ್ರಣ ಪತ್ರವನ್ನು ಮಾಜಿ ಸಂಸದ, ನೇಸರ ದಶ ಪ್ರಣತಿ ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ‌ಕಟೀಲು ಅವರು ತಮ್ಮ ಕುಂಜಾಡಿ‌ ನಿವಾಸದಲ್ಲಿ‌ ಬಿಡುಗಡೆಗೊಳಿಸಿದರು.

ದಶ ವರ್ಷದ ಸಾಧನೆ ತಿಳಿಸುವ ನೇಸರ ಯಶೋಗಾಥೆಯನ್ನು ವೀಕ್ಷಿಸಿದ ಮಾಜಿ ಸಂಸದರು ಕಳೆದ ಒಂಭತ್ತು ವರ್ಷಗಳಲ್ಲಿ 55ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮ‌‌ ಹಮ್ಮಿಕೊಂಡ ನೇಸರ ಯುವಕ ಮಂಡಲದ ಸಾಮಾಜಿಕ‌ ಕಾಳಜಿಯನ್ನು ಶ್ಲಾಘಿಸಿದರು. ಸಮಾಜಮುಖಿ ಚಿಂತನೆಯ ಕಾರ್ಯಗಳ ಅಗತ್ಯೆಗಳ ಬಗ್ಗೆ ವಿವರಿಸಿದರು.


ನೇಸರ ಯುವಕ ‌ಮಂಡಲ‌ ಗೌರವಾಧ್ಯಕ್ಷ, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಸಾಮಾಜಿಕ ಮುಂದಾಳುಗಳಾದ ಪ್ರಸನ್ನ ಮಾರ್ಥ, ಶ್ರೀನಾಥ್ ರೈ ಬಾಳಿಲ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಜಯಂತ ಕುಂಡಡ್ಕ, ರಕ್ಷಿತ್ ಗೌಡ ಕಾನಾವು, ರವಿ ಕುಂಡಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here