ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕಬ್ ಬುಲ್ ಬುಲ್ ವಿಶ್ವೇಶ ದಳದ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪಕರಾದ ರಾಬರ್ಟ್ ಸ್ಟೀಫನ್ ಸನ್ ಸ್ಮಿತ್ ಬೇಡನ್ ಪೋವೆಲ್ ಹಾಗೂ ಸೇಂಟ್ ಆಲೀವ್ ಕ್ಲೀರ್ ಸೋಮ್ಸ್ರವರ ಹುಟ್ಟುಹಬ್ಬದ ನೆನಪಿಗಾಗಿ “ವಿಶ್ವಚಿಂತನಾ ದಿನ” ಹಾಗೂ “ವಿಶ್ವಭ್ರಾತೃತ್ವ ದಿನಾಚರಣೆ”ಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪರೈಯವರ ಮಾರ್ಗದರ್ಶನದಲ್ಲಿ ಫೆ.22ರಂದು ಆಚರಿಸಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ. ದೀಪ ಬೆಳಗಿಸಿ ಪುಷ್ಪಾರ್ಚನೆಗೈದು ಬೇಡನ್ರವರ ಜೀವನದ ಸಾಧನೆಗಳನ್ನು ತಿಳಿಸಿ, ವಿದ್ಯಾರ್ಥಿಗಳೆಲ್ಲರೂ ಅವರ ಗುಣಾದರ್ಶಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡು ಸೇವೆಗೆ ಸದಾ ಸಿದ್ಧರಾಗಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಗುರು ಗಾಯತ್ರಿ ಯು.ಎನ್, ಗೈಡ್ ನಾಯಕಿಯರಾದ ಪ್ರೇಮ ಬಿ, ದಿವ್ಯಾ ಜಿ, ಮಲ್ಲಿಕಾ, ಸ್ಕೌಟ್ ಮಾಸ್ಟರ್ ರಾಘವ, ಬುಲ್ ಬುಲ್ ನಾಯಕಿಯರಾದ ಕವಿತಾ, ಸುನಂದ, ಸಂಧ್ಯಾ ಹಾಗೂ ಕಾವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಾರ್ವರಿ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಅಧ್ಯಾಪಕವೃಂದದವರು ಸಹಕರಿಸಿದರು.