ಆನೆಮಜಲು ಅಂಗನವಾಡಿ ನೂತನ ಕಟ್ಟಡ ಉದ್ಘಾಟನೆ

0

ಅಂಗನವಾಡಿಯಲ್ಲಿ ದೊರೆಯುವ ಶಿಕ್ಷಣ ಮಕ್ಕಳ ಶಿಕ್ಷಣದ ಅಡಿಪಾಯ- ಶಾಸಕ ಅಶೋಕ್‌ ಕುಮಾರ್‌ ರೈ

ಪುತ್ತೂರು: ಹಿಂದಿನ ಕಾಲದಲ್ಲಿ ಮನೆಯಲ್ಲಿ ಮಕ್ಕಳಿಗೆ ತಾಯಂದಿರು ನೀಡುತ್ತಿದ್ದ ಶಿಕ್ಷಣವನ್ನುಇಂದು ಅಂಗನವಾಡಿಯಲ್ಲಿ ಕಾರ್ಯಕರ್ತೆಯರು ನೀಡುತ್ತಿದ್ದು ಈ ಕಾರಣಕ್ಕೆ ಅವರು ತಾಯಿಗೆ ಸಮಾನವಾಗಿದ್ದಾರೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಬನ್ನೂರು ಗ್ರಾಮದ ಆನೆಮಜಲು ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.


ನ್ಯಾಯಾಲಯದ ಸಂಕೀರ್ಣದ ಬಳಿ ಹೊಸ ಕಟ್ಟಡ ನಿರ್ಮಾಣವಾಗಿದೆ ಭವಿಷ್ಯದ ದೃಷ್ಟಿಯಲ್ಲಿ ಈ ಅಂಗನವಾಡಿಗೆ ಮಹತ್ವ ಇದೆ. ಅಂಗನವಾಡಿಗೆ ಮಕ್ಕಳನ್ನು ದಾಖಲಿಸುವ ಮೂಲಕ ಅದನ್ನು ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು. ಅಂಗನವಾಡಿಯಲ್ಲಿ ದೊರೆಯುವ ಶಿಕ್ಷಣ ಮಕ್ಕಳ ಶಿಕ್ಷಣದ ಅಡಿಪಾಯವಾಗಿದೆ ಎಂದು ಹೇಳಿದರು.


ವೇದಿಕೆಯಲ್ಲಿ ನಗರಸಭಾ ಸದಸ್ಯೆ ಗೌರಿ ಬನ್ನೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಗ್ರೇಸಿ ಗೊನ್ಸಾಲಿಸ್, ಲೋಕೋಪಯೋಗಿ ಇಂಜಿನಿಯರ್ ಕನಿಷ್ಕ, ಕಟ್ಟಡದ ದಾನಿ ಗುತ್ತಿಗೆದಾರ ಆಸಿಫ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕು ಸುಜಾತಾ ಉಪಸ್ಥಿತರಿದ್ದರು.
ಬಾಲ ವಿಕಾಸ‌ಸಮಿತಿ ಅಧ್ಯಕ್ಷೆ ಚಿತ್ರಿಕಾ ಸ್ವಾಗತಿಸಿದರು. ಹರಿಪ್ರಸಾದ್ ವಂದಿಸಿದರು. ದೇವಿಕಾ ಕಾರ್ಯಕ್ರಮ‌ನಿ ರೂಪಿಸಿದರು.

LEAVE A REPLY

Please enter your comment!
Please enter your name here