ಡಿ’ಝೋನ್ ಡ್ಯಾನ್ಸ್ ಸ್ಟುಡಿಯೋ ಶುಭಾರಂಭ

0

ಪುತ್ತೂರು: ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ದೇಶದಲ್ಲಿಯೇ ಖ್ಯಾತಿ ಪಡೆದ ಪುತ್ತೂರಿನ ನಂಬರ್ ವನ್ ಡ್ಯಾನ್ಸ್ ತರಬೇತಿ ಕೇಂದ್ರ ಡಿ’ಝೋನ್ ಡ್ಯಾನ್ಸ್ ಸ್ಟುಡಿಯೋ ಫೆ.26ರಂದು ದರ್ಬೆ ಪ್ರೀತಿ ಆರ್ಕೆಡ್ ಮೂರನೇ 3ನೇ ಮಹಡಿಯಲ್ಲಿ ಶುಭಾರಂಭಗೊಂಡಿತು.

ಸಂಸ್ಥೆಯನ್ನು ಉದ್ಘಾಟಿಸಿದ ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್ ಅಧ್ಯಕ್ಷ ಲಕ್ಷೀ ಶೆಟ್ಟಿ ಮಂಗಳೂರು ಮಾತನಾಡಿ, ವಿಭಿನ್ನ ಹಾಗೂ ವಿನೂತನವಾಗಿ ಮೂಡಿ ಬರುತ್ತಿರುವ ನೃತ್ಯಗಳು ದ.ಕ ಜಿಲ್ಲೆಯಲ್ಲಿ ವೇಗವಾಗಿ ಮುಂದುವರಿಯುತ್ತದೆ. ನೃತ್ಯ ಪ್ರಕಾರಗಳನ್ನು ಆಧುನಿಕವಾಗಿ ದೇಶಕ್ಕೆ ಸಂಬಂಧಿಸಿದ ಹೊಸತನದೊಂದಿಗೆ ಅನಾವರಣಗೊಳಿಸುವ ಪ್ರಯೋಗ ಮಾಡಬೇಕು. ಆಗ ನೃತ್ಯದ ಬಗ್ಗೆ ಇನ್ನಷ್ಟು ಸ್ಪೂರ್ತಿ ಬರಲು ಸಾಧ್ಯವಿದೆ. ವೃತ್ತಿಪರರಿಗೆ ತೊಂದರೆ ಆಗದಂತೆ ಕೊರಿಯೋಗ್ರಾಫರ್‌ಗಳು ಮಾರ್ಗದರ್ಶನ ನೀಡಬೇಕು ಎಂದ ಅವರು ಡಿ ಝೋನ್ ಮೂಲಕ ಇನ್ನಷ್ಟು ಉದಯೋನ್ಮುಖ ಕಲಾವಿದರ ವೇದಿಕೆಗೆ ಬರಲಿ ಎಂದರು.

ಆಕೃತಿ ಇನ್ಪ್ರಾಸ್ಟ್ರಕ್ಚರ್‌ನ ಮಾಲಕ ಪ್ರಥಮ್ ರೈ ಮಾತನಾಡಿ, ಹಲವು ನೃತ್ಯ ಪ್ರಕಾರಗಳ ಮೂಲಕ ಉತ್ತಮ ಹೆಸರುವಾಸಿಯಾಗಿದ್ದ ಡಿ ಝೋನ್ ಸಂಸ್ಥೆ ಮತ್ತೆ ಪ್ರಾರಂಭಗೊಂಡಿದೆ. ಸಂಸ್ಥೆ ಕೀರ್ತಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಯಲಿ ಎಂದರು. ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್ ಕಾರ್ಯದರ್ಶಿ ಯತೀಶ್ ಸಾಲಿಯಾನ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಉತ್ತಮ ರೀತಿಯಲ್ಲಿ ಮತ್ತೆ ಪ್ರಾರಂಭಗೊಂಡಿದ್ದು ಇನ್ನಷ್ಟು ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದರು. ದೀಕ್ಷಿತ್ ರಾಜ್ ಸಂಸ್ಥೆ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ‌

ಡ್ಯಾನ್ಸ್ ಫೆಡರೇಷನ್ ಅಧ್ಯಕ್ಷ ಶ್ರೀನಿ ಆಚಾರ್ಯ, ಡಿ ಝೋನ್ ಡ್ಯಾನ್ಸ್ ಕ್ಲಬ್ ಕಾರ್ಯದರ್ಶಿ ಪ್ರಸಾದ್ ರೈ, ವಿನಿಲ್, ನಿಖಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತನುಶ್ರೀ ಕೆ.ವಿ ಸ್ವಾಗತಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು. ಸಾತ್ವಿಕ್, ಶಶಾಂಕ್, ಶ್ರೇಯಸ್, ವೈಭವ್, ಭವಿತ್, ಡೆಲ್ವಿನ್, ಲಾರೆನ್ಸ್, ಸುಧೀಂದ್ರ, ಪ್ರೀತಿಕಾ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here