ವಿಟ್ಲ: ಆಟೋ ರಿಕ್ಷಾಗಳ ಮಧ್ಯೆ ಅಪಘಾತ – ಓರ್ವ ಮೃತ್ಯು – 9 ಮಂದಿಗೆ ಗಾಯ

0

ವಿಟ್ಲ: ಪಡಿಬಾಗಿಲು ಅಳಿಕೆ ಸಂಪರ್ಕ ರಸ್ತೆಯಲ್ಲಿ ಪಡಿಬಾಗಿಲು ದ್ವಾರದ ಬಳಿ ರಿಕ್ಷಾಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ 9ಮಂದಿ ಮಂದಿ ಗಾಯಗೊಂಡಿದ್ದು. ಓರ್ವ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಳಕೆ ಮಡಿಯಾಲ ನಿವಾಸಿ ಅಮ್ಮು ಮೂಲ್ಯ ಮೃತಪಟ್ಟವರು (69) ಎಂದು ಗುರುತಿಸಲಾಗಿದೆ.

ಎರುಂಬು ನಿವಾಸಿ ಹಮೀದ್ , ಪಡಿಬಾಗಿಲು ನಿವಾಸಿ ರವಿ ಎಂಬವರಿಗೆ ಸೇರಿದ ರಿಕ್ಷಾಗಳಾಗಿದೆ . ನೇರವಾಗಿ ಇರುವ ರಸ್ತೆಯಲ್ಲಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ರಿಕ್ಷಾಗಳ ಮುಂಬಾಗ ನಜ್ಜುಗುಜ್ಜಾಗಿದೆ.ಅಪಘಾತಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here