ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾರ್ಯದರ್ಶಿ ದಾಮೋದರ ಪಾಟಾಳಿ
ಪುತ್ತೂರು:ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಪುತ್ತೂರಿನ ರೋಟರಿ ಕ್ಲಬ್‌ಗಳ ಕಿರೀಟಕ್ಕೆ ಮತ್ತೊಂದು ಗರಿಯಾಗಿ ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್ ಪ್ರಾರಂಭಗೊಂಡಿದೆ.
ರೋಟರಿ ಕ್ಲಬ್ ಪುತ್ತೂರು ಪೂರ್ವದಿಂದ ಸಂಯೋಜನಗೊಂಡಿರುವ ನೂತನ ರೋಟರಿ ಕ್ಲಬ್ ಪುತ್ತೂರು ಬೀರಮಲೆ ಹಿಲ್ಸ್‌ನ ಪ್ರಥಮ ಅಧ್ಯಕ್ಷರಾಗಿ ರಾಜಕೀಯ, ಸಾಮಾಜಿಕ ಮುಖಂಡರು, ಜೆಸಿಐ ಮಾಜಿ ಅಧ್ಯಕ್ಷರಾಗಿರುವ ಕೃಷ್ಣಪ್ರಸಾದ್ ಆಳ್ವ ಹಾಗೂ ಕಾರ್ಯದರ್ಶಿಯಾಗಿ ಸಾಮಾಜಿಕ ಮುಖಂಡರು, ಜೇಸಿಐ ಮಾಜಿ ಅಧ್ಯಕ್ಷರು, ಮಾಜಿ ವಲಯ ಉಪಾಧ್ಯಕ್ಷರಾಗಿರುವ ದಾಮೋದರ ಪಾಟಾಲಿ ಆಯ್ಕೆಯಾಗಿದ್ದಾರೆ.
ಪುತ್ತೂರಿನಲ್ಲಿ ಈಗಾಗಲೇ 7 ರೋಟರಿ ಕ್ಲಬ್‌ಗಳ ಕಾರ್ಯನಿರ್ವಹಿಸುತ್ತಿದೆ. ಇದೀಗ ಎಂಟನೇ ಕ್ಲಬ್ ಆಗಿ ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್ ಪ್ರಾರಂಭಗೊಂಡಿದೆ. ರೋಟರಿ ಸಂಸ್ಥೆಯ ಸ್ಥಾಪನ ದಿನವಾದ ಫೆ.23ರಂದು ಚೆಲ್ಯಡ್ಕ ಆಳ್ವರ ಮನೆಯಲ್ಲಿ ನಡೆದ ಕ್ಲಬ್ ರಚನೆಯ ಮಾಹಿತಿ ಕಾರ್ಯಾಗಾರದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕ್ಲಬ್ ಒಟ್ಟು 28 ಮಂದಿ ಸದಸ್ಯರನ್ನು ಒಳಗೊಂಡಿದೆ. ಈ ಕ್ಲಬ್‌ಗಳ ಮೂಲಕ ಪುತ್ತೂರಿನ ಬೀರಮಲೆ ಬೆಟ್ಟದ ಅಭಿವೃದ್ಧಿಗೆ ಸಹಕರಿಸುವುದಾಗಿ ಕ್ಲಬ್‌ನ ಸದಸ್ಯರ ನಿರ್ಣಯವಾಗಿದೆ. ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್‌ನ ಮಾತ್ರ ಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್‌ನ ವಿಶ್ವಾಸ್ ಶೆಣೈ ಸದಸ್ಯರಿಗೆ ರೋಟರಿಯ ಬಗ್ಗೆ ಮಾಹಿತಿ ನೀಡಿದರು. ನೂತನ ಕ್ಲಬ್‌ನ ಮಾರ್ಗದರ್ಶಕ ಶರತ್ ಕುಮಾರ್ ರೈ, ಕ್ಲಬ್‌ನ ಪೂರ್ವ ಅಧ್ಯಕ್ಷ ಮುರಳಿ ಶಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 26 ಮಂದಿ ನೂತನ ಸದಸ್ಯರು ಸಭೆಯಲ್ಲಿ ಹಾಜರಾಗಿದ್ದರು. ನಿಯೋಜಿತ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವಂದಿಸಿದರು. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವೂ ಶೀಘ್ರದಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.