ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ “ರೈತ ಶಕ್ತಿ” ಉದ್ಘಾಟನೆ

0

ಈ ಭಾಗದ ಸಾಧನೆಯಿಂದ ಸಾವಿರ ಲೀಟರ್ ಹಾಲಿನ ಬಿಎಮ್‌ಸಿ ಸ್ಥಾಪನೆಯಾಗಲಿ – ವಿವೇಕ್ ಡಿ

ಪುತ್ತೂರು: ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘ ಎಲ್ಲರ ಸಹಕಾರದಿಂದ ಎದ್ದು ನಿಂತಿದೆ. ಈ ತರದ ಸಾಧನೆಯಿಂದ ಹೈನುದ್ಯಮ ಬೆಳೆಯಬೇಕು. ಈ ಸಾಧನೆ ಇಲ್ಲಿಯೇ ನಿಲ್ಲದೆ 1 ಸಾವಿರ ಲೀಟರ್ ಹಾಲು ಸಂಗ್ರಹದ ಬಿಎಮ್‌ಸಿ ಸ್ಥಾಪನೆಯಾಗಲಿ ಎಂದು ದ.ಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ ಹೇಳಿದರು.

ಆರ್ಯಾಪು ಗ್ರಾಮದ ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದದಲ್ಲಿ ಸಂಘ ನೂತನ ಕಟ್ಟಡ “ರೈತ ಶಕ್ತಿ”ಯನ್ನು ಅವರು ಫೆ.27ರಂದು ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಈ ಸಂಘದಲ್ಲಿ 300 ರಿಂದ 400 ಲೀಟರ್ ಹಾಲು ಸಂಗ್ರಹಣೆಯಾಗುತ್ತಿತ್ತು ಮುಂದೆ ಅದು 1 ಸಾವಿರ ಲೀಟರ್ ಹಾಲು ಸಂಗ್ರಹಣೆಯಾಗುವಂತಾಗಲಿ ಹಾಗೂ ಆ ಮೂಲಕ ಇಲ್ಲೊಂದು ಬಿಎಮ್‌ಸಿ ಸ್ಥಾಪನೆಯಾಗಲಿ ಎಂಬುದು ನನ್ನ ಆಶಯ ಎಂದ ಅವರು, ಈ ಭಾಗದಲ್ಲಿ ಹೈನು ಉದ್ಯಮ ಹೆಚ್ಚು ಮಾಡಿ ಎಂದರು. ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಪ್ರಭು ಅಧ್ಯಕ್ಷತೆ ವಹಿಸಿ ಸಂಘದ ಅಭಿವೃದ್ಧಿಗೆ ಪ್ರೋತ್ಸಾಹಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಕ್ಷೇ. ಧ. ಗ್ರಾ.ಯೋ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅವರು ಗೋದಾಮು ಉದ್ಘಾಟಿಸಿದರು.

ನಿರ್ದೇಶಕ ಗೋಪಾಲ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು ರೂ. 9.5ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಆಗಿದೆ. ಒಕ್ಕೂಟ, ಗ್ರಾಮಾಭಿವೃದ್ದಿ ಯೋಜನೆ, ಸದಸ್ಯರ ಡಿವಿಡೆಂಡ್ ಮೂಲಕ ಅನುದಾನ ಸಂಗ್ರಹಿಸಿದ್ದೇವೆ. ಇದರ ಜೊತೆಗೆ ಶಾಸಕರು ರೂ.3 ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಸಂಘದ ಸದಸ್ಯರ ನಿರಂತರ ಪ್ರೋತ್ಸಾಹ ಮತ್ತು ದುಡಿಮೆಯಿಂದ ಈ ಕಟ್ಟಡ ನಿರ್ಮಾಣಕ್ಕೆ ಶ್ರಮ ವಹಿಸಿದ್ದಾರೆ ಎಂದರು. ದ.ಕ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ರಾಮಕೃಷ್ಣ ಭಟ್, ದ.ಕ ಹಾಲು ಒಕ್ಕೂಟ ಇದರ ಉಪವ್ಯವಸ್ಥಾಪಕ ಡಾ. ಡಿ.ಆರ್ ಸತೀಶ್ ರಾವ್, ಊರಿನ ಗಣ್ಯರಾದ ಎಂ.ಬಿ.ವಿಶ್ವನಾಥ ರೈ, ವಿಶ್ವೇಶ್ವರ ಭಟ್ ಬಂಗಾರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸಂದ್ಯಾ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಗಂಗಾದರ ರೈ, ನಿರ್ದೇಶಕ ಚಿದಾನಂದ ಸುವರ್ಣ, ಸೂರ್ಯನಾರಾಯಣ ಪ್ರಭು, ಹೊನ್ನಪ್ಪ ಪೂಜಾರಿ, ಸುಧಾಕರ್ ನಾಯಕ್, ಉಮೇಶ್ ಗೌಡ, ಅತಿಥಿಗಳನ್ಬು ಗೌರವಿಸಿದರು. ಸಂಘದ ನಿರ್ದೇಶಕ ಗೋಪಾಲ ಭಟ್ ಸ್ವಾಗತಿಸಿದರು. ನಿರ್ದೇಶಕ ಚಿದಾನಂದ ಸುವರ್ಣ ವಂದಿಸಿದರು. ರಂಜಿತಾ ಆರ್ ಪ್ರಭು ಪ್ರಾರ್ಥಿಸಿದರು. ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಆರ್ಯಾಪು ಗ್ರಾ.ಪಂ ಸದಸ್ಯರಾದ ವಸಂತ, ಶ್ರೀನಿವಾಸ, ಸುಬ್ರಹ್ಮಣ್ಯ ಬಲ್ಯಾಯ, ದ.ಕ.ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣಪ್ರಕಾಶ್, ಶ್ರೀ ಕ್ಷೇ.ಧ.ಗ್ರಾ.ಯೋ ಸೇವಾಪ್ರತಿನಿಧಿ ಇಗ್ನೀಶಿಯಸ್ ಡಿಸೋಜ, ಮಹಾಬಲ ರೈ ವಳತ್ತಡ್ಕ, ಪಶು ವೈದ್ಯಾಧಿಕಾರಿ ಅನುದೀಪ್, ವಿಸ್ತರಣಾಧಿಕಾರಿ ಮಾಲತಿ, ಜನಾರ್ದನ, ಕಿಟ್ಟಣ್ಣ ರೈ, ಕುಂಜೂರುಪಂಜ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಶ್ರೀಧರ್ ನಾಯಕ್ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

ಬೇಡಿಕೆಗಿಂತ ಕಡಿಮೆ ಉತ್ಪಾದನೆ :
ದಕ್ಷಿಣ ಕನ್ನಡ ಹಾಗೂ ಉಡುಪಿ ಉಭಯ ಜಿಲ್ಲೆಯಲ್ಲಿ ಹಾಲಿನ ಇಳುವರಿ ತುಂಬಾ ಕಡಿಮೆಯಾಗಿದೆ. ಸುಮಾರು 5ಲಕ್ಷ ಲೀಟರ್ ಆಸುಪಾಸಿನಲ್ಲಿದ್ದ ಹಾಲಿನ ಇಳುವರಿ ಇವತ್ತು ರೂ. 3.60ಲಕ್ಷ ಲೀಟರ್‌ಗೆ ಇಳಿದಿದೆ. ಆದರೆ ಈ ಎರಡು ಜಿಲ್ಲೆಗಳಲ್ಲಿ ಹಾಲಿನ, ಹಾಲಿನ ಉತ್ಪನ್ನ ಮಾರಾಟ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು ಸುಮಾರು 5ಲಕ್ಷ ಲೀಟರ್‌ನಷ್ಟು ಹಾಲಿನ ಬೇಡಿಕೆಯಿದೆ. ಇಂತಹ ಸಂದರ್ಭದಲ್ಲಿ ಸುಮಾರು 2ಲಕ್ಷ ಲೀಟರ್‌ನಷ್ಟು ಹಾಲನ್ನು ನಾವು ಈಗಾಗಲೇ ಹೊರ ಜಿಲ್ಲೆಯ ಒಕ್ಕೂಟಗಳಿಂದ ಖರೀದಿಸುತ್ತಿದ್ದೇವೆ. ಇಲ್ಲಿ ಸಾಗಾಟ ಸೇರಿದಂತೆ ದುಬಾರಿ ವೆಚ್ಚ ತಗಲುತ್ತದೆ. ಇದರಿಂದ ಒಕ್ಕೂಟಕ್ಕೆ ಮತ್ತು ಹಾಲು ಉತ್ಪಾದಕರಿಗೂ ನಷ್ಟ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲೇ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ಕೊಡಿ. ಹಸುಗಳನ್ನು ಮಾರಾಟ ಮಾಡಲು ದುಡುಕದಿರಿ. ಇವತ್ತು ಹಾಲಿನ ಬೇಡಿಕೆ ಹೆಚ್ಚಾಗುತ್ತಿದೆ.
– ವಿವೇಕ್ ಡಿ. ವ್ಯವಸ್ಥಾಪಕ ನಿರ್ದೇಶಕ, ದ.ಕ ಹಾಲು ಒಕ್ಕೂಟ

LEAVE A REPLY

Please enter your comment!
Please enter your name here