ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಜುಪಿಟರ್ ಬೈಕ್ ಬಂಪರ್ ಡ್ರಾ

0

ಪುತ್ತೂರು: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 25 ವರ್ಷಗಳಿಂದ ವ್ಯವಹರಿಸುತ್ತಿರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಫೆ.28ರಂದು 19ನೇ ಬಂಪರ್ ಡ್ರಾ ನಡೆಯಿತು.


ಮುಖ್ಯ ಅತಿಥಿಗಳಾದ ಕಾಂಗ್ರೆಸ್ ಮುಖಂಡ ಶಿವರಾಮ ಆಳ್ವರವರು ಮಿಕ್ಸಿ ಮತ್ತು ಗ್ಯಾಸ್‌ಸ್ಟವ್ ವಿಜೇತರ ಡ್ರಾ. ನಡೆಸಿದರು. ಮಿಕ್ಸಿ ವಿಜೇತರಾಗಿ (AE1181
) ರಾಮಚಂದ್ರ ಭಟ್ ಬಂಗಾರಡ್ಕ ಹಾಗೂ ಗ್ಯಾಸ್ ಸ್ಟವ್ ವಿಜೇತರಾಗಿ (AE0108) ನಸೀಮಾ ಕಂಬಳಬೆಟ್ಟುರವರು ಆಯ್ಕೆಯಾದರು. ಗುತ್ತಿಗೆದಾರ ಜಯಕುಮಾರ್ ನಾಯರ್‌ರವರು ಮಿಕ್ಸಿ ಮತ್ತು ಎಲ್‌ಇಡಿ ಟಿವಿ ವಿಜೇತರ ಡ್ರಾ. ನಡೆಸಿದರು. ಮಿಕ್ಸಿ ವಿಜೇತರಾಗಿ (AE0983) ಉಮೈಬಾಸ್ ಸವಣೂರು, ಎಲ್‌ಇಡಿ ಟಿವಿ ವಿಜೇತರಾಗಿ (AE1912) ಮೋಹನ್ ತೆಂಕಿಲ ಆಯ್ಕೆಯಾದರು. ಮುಂಡೂರು ಪಂಜಳ ಶಾಂತಿಭವನ ಬಿಷಪ್ ಹೌಸ್‌ನ ಫಾ.ಸೆಬಾಸ್ಟಿಯನ್ ಬಂಪರ್ ಡ್ರಾ. ವಿಜೇತರ ಆಯ್ಕೆ ನಡೆಸಿದರು. ಜುಪಿಟರ್ ಬಂಪರ್ ಡ್ರಾ. ವಿಜೇತರಾಗಿ(AE1608) ಚಾರ್ವಾಕ ಗ್ರಾಮದ ಆನಂದ ಆಯ್ಕೆಯಾದರು.

ಡ್ರಾ. ನಡೆಸಿದ ಅತಿಥಿಗಳು ಶುಭಹಾರೈಸಿದರು. ಶೇಟ್ ಇಲೆಕ್ಟ್ರಾನಿಕ್ಸ್ ಮಾಲಕ ರೂಪೇಶ್ ಶೇಟ್ ಸ್ವಾಗತಿಸಿದರು. ಸಿಬಂದಿ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here